ಕುಂದಾಪುರ : ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ 6 ವಲಯಗಳ ಸಹಯೋಗದೊಂದಿಗೆ ನಡೆದ ಭಜನಾ ಪರ್ವ- 2023, ಕಾರ್ಯಕ್ರಮದಲ್ಲಿ ಭಜನಾ ಒಕ್ಕೂಟ ಹಾಲಾಡಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಸುಶೀಲಾ ಅತುಲ್ ಶೆಟ್ಟಿ ಶ್ರೀ ಜಟ್ಟಿಗೆಶ್ವರ ಭಜನಾ ಮಂಡಳಿ ರಾಜನ್ ಬೆಟ್ಟು ಜನ್ನಾಡಿ ಹಾಗೂ ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಆನಂದ್ ಶೆಟ್ಟಿ ಮುದುರಿ, ಉಪಾಧ್ಯಕ್ಷರಾಗಿ ಮುರುಳಿಧರ್ ಶೆಟ್ಟಿ ದುರ್ಗಾ ಭಜನಾ ಮಂಡಳಿ ಹುಯ್ಯಾರು, ಜ್ಯೋತಿ ಮಹಾಲಿಂಗೇಶ್ವರ ಭಜನಾ ಮಂಡಳಿ ನಾಲ್ತುರು, ಕೋಶಾಧಿಕಾರಿಯಾಗಿ ನಿತ್ಯಾನಂದ ಶೆಟ್ಟಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಆಚಾರ್ಯ ಶ್ರೀ ಸುಮುಖ ಭಜನಾ ಮಂಡಳಿ ನೈಲಾಡಿ ಹಾಗೂ ಸದಸ್ಯರುಗಳಾಗಿ ವಲಯದ ಎಲ್ಲಾ ಭಜನಾ ಮಂಡಳಿಗಳ ಒಬ್ಬರು ಸದಸ್ಯರು ಆಯ್ಕೆಯಾಗಿರುತ್ತಾರೆ