Share this news

ನಿತ್ಯ ಪಂಚಾಂಗ :
ದಿನಾಂಕ:19.07.2023, ಬುಧವಾರ, ಸಂವತ್ಸರ:ಶೋಭಕೃತ್,
ದಕ್ಷಿಣಾಯನ, ವರ್ಷ ಋತು,ಕರ್ಕಾಟಕ ಮಾಸ
ಶುಕ್ಲಪಕ್ಷ,ನಕ್ಷತ್ರ:ಪುಷ್ಯ ,
ರಾಹುಕಾಲ 12:37 ರಿಂದ 02:13 ಗುಳಿಕಕಾಲ-11:01 ರಿಂದ 12:37 ಸೂರ್ಯೋದಯ (ಉಡುಪಿ) 06:13 ಸೂರ್ಯಾಸ್ತ – 07:00

ರಾಶಿ ಭವಿಷ್ಯ

ಮೇಷ ರಾಶಿ  (Aries) :  ಇಂದು ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ, ಇದರಿಂದ ಸಮಯ ವ್ಯರ್ಥ ಆಗಲಿದೆ ಅಷ್ಟೆ. ಇಂದು ನಿಮ್ಮ ಮನಸ್ಸು ಸ್ವಲ್ಪ ವಿಚಲಿತವಾಗಬಹುದು. ಇಂದು ನಿಮಗೆ ಹೆಚ್ಚಿನ ಕೆಲಸ ಇರಬಹುದು. ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಲಾಭ ಇರಲಿದೆ.

ವೃಷಭ ರಾಶಿ  (Taurus): ಇಂದು ತೊಂದರೆಗಳಿಂದ ನಿಮ್ಮ ನಿಕಟ ಸಂಬಂಧಿಯು ನಿಮ್ಮನ್ನು ಪಾರು ಮಾಡುವನು. ಇದರಿಂದ ಕೆಲ ಒತ್ತಡದಿಂದ ನಿಮಗೆ ಮುಕ್ತಿ ಸಿಗಲಿದೆ. ಕುಟುಂಬದ ಸದಸ್ಯರ ವಿವಾಹವು ಮನೆಯಲ್ಲಿ ಸಂತೋಷದ ವಾತಾವರಣವನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ಶಾಂತಿಯ ವಾತಾವರಣ ಇರಲಿದೆ.

ಮಿಥುನ ರಾಶಿ (Gemini) : ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಸೋದರಸಂಬಂಧಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ಪತಿ ಮತ್ತು ಹೆಂಡತಿಯ ನಡುವೆ ಸಾಮರಸ್ಯ ಇರಲಿದೆ.

ಕಟಕ ರಾಶಿ  (Cancer) :  ಇಂದಿನ ದಿನದ ಆರಂಭವು ತುಂಬಾ ಚೆನ್ನಾಗಿರಲಿದೆ. ಇಂದು ವ್ಯಾಪಾರದಲ್ಲಿ ಸ್ವಲ್ಪ ಸ್ಪರ್ಧೆಯನ್ನು ಎದುರಿಸಬಹುದು. ಒಂದು ಒಳ್ಳೆ ಸುದ್ದಿ ಕೇಳಿ ಮನಸಿಗೆ ಆನಂದ ಆಗಲಿದೆ. ಯಾರದೋ ತಪ್ಪು ನಿರ್ಧಾರವು ನಿಮ್ಮನ್ನು ದಾರಿ ತಪ್ಪಿಸಬಹುದು.

ಸಿಂಹ ರಾಶಿ  (Leo) : ಇಂದು ದಿನನಿತ್ಯದ ಜೀವನದ ಹೊರತಾಗಿ ಸ್ವಲ್ಪ ಸಮಯವನ್ನು ಸ್ವಯಂ ಅವಲೋಕನದಲ್ಲಿ ಕಳೆಯುವಿರಿ. ಈ ಸಮಯದಲ್ಲಿ ಜೀವನದಲ್ಲಿ ಕೆಲವು ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ. ಯಾವುದೇ ಹಳೆಯ ವಿವಾದಗಳು ಉದ್ಭವಿಸಬಹುದು.

ಕನ್ಯಾ ರಾಶಿ (Virgo) : ಇಂದು ಕೂಡ ಯುವಕರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಈ ರಾಶಿಯವರ ಆರೋಗ್ಯ ಚೆನ್ನಾಗಿರುತ್ತದೆ. ಧ್ಯಾನ ಮಾಡಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಕಾರಾತ್ಮಕ ಜನರೊಂದಿಗೆ ಸಂಪರ್ಕದಲ್ಲಿರುವಿರಿ. ಗ್ರಹಗಳ ಸ್ಥಾನವು ಅನುಕೂಲಕರವಾಗಿದೆ.

ತುಲಾ ರಾಶಿ (Libra) :  ಇಂದು ನಿಮ್ಮ ಪಾಡಿಗೆ ನೀವು ಇದ್ದು ಬಿಡಿ, ಇತರರ ಕೆಲಸಗಳಲ್ಲಿ ಮೂಗು ತೂರಿಸಬೇಡಿ, ಇದರಿಂದ ನಿಮಗೆ ತೊಂದರೆ ಆಗಲಿದೆ. ಇಂದು ನಿಮ್ಮ ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚಲಿದೆ. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ.

ವೃಶ್ಚಿಕ ರಾಶಿ (Scorpio) :   ಇಂದು ವ್ಯಾಪಾರದಲ್ಲಿ ನಿಮಗೆ ಸ್ಪರ್ಧೆ ಇರಲಿದೆ, ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು.  ಹಾಗೂ ಕೆಲವು ವಿವಾದಗಳು ಉಂಟಾಗಬಹುದು. ಗಂಡ ಮತ್ತು ಹೆಂಡತಿ ನಡುವೆ ಕಲಹ ಸಾಧ್ಯತೆ. ಶತ್ರುಗಳಿಂದ ಅಪಾಯ ಸಾಧ್ಯತೆಯಿದೆ. ಜಾಗೃತೆಯಿಂದ ಇರಿ.

ಧನು ರಾಶಿ (Sagittarius):   ಅಹಂಕಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಜಗಳ ಉಂಟಾಗಬಹುದು. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.  ಈ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿತಿಯು ಗಟ್ಟಿಯಾಗಿ ಇರಲಿ.

ಮಕರ ರಾಶಿ (Capricorn) : ಇಂದು ಸೋಮಾರಿತದಿಂದ ಇರಬೇಡಿ, ಯಾಕೆಂದ್ರೆ ಆಲಸ್ಯವು ನಿಮ್ಮನ್ನು ಆಳುತ್ತದೆ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ಅದನ್ನು ಪೂರೈಸಲು ಮರೆಯದಿರಿ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ.

ಕುಂಭ ರಾಶಿ (Aquarius):  ಪ್ರಯಾಣ ಮಾಡುವಾಗ ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರವಿರಲಿ. ಗ್ಲಾಮರ್‌ಗೆ ಸಂಬಂಧಿಸಿದ ವ್ಯಾಪಾರ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಸ್ತುಗಳು ಈ ಸಮಯದಲ್ಲಿ ಪ್ರಯೋಜನಕಾರಿಯಾಗುತ್ತವೆ.

ಮೀನ ರಾಶಿ  (Pisces): ಇಂದು ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಮಾತನಾಡಬೇಡಿ. ಆತಂಕದ ಪರಿಸ್ಥಿತಿ ಕೂಡ ಸಂಭವಿಸಬಹುದು.

Leave a Reply

Your email address will not be published. Required fields are marked *