ಕಾರ್ಕಳ : ಇಸ್ಲಾಂ ವಿದ್ಯೆಗೆ ಬಹಳ ಮಹತ್ವವನ್ನು ನೀಡಿದೆ. ಹೆಣ್ಣು ಮಕ್ಕಳಿಗೆ ವಿದ್ಯೆ ನೀಡುವಲ್ಲಿ ನಾವೆಂದು ಹಿಂದೆ ಉಳಿದಿಲ್ಲ ಆದರೆ ನಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರದ ವಿರುದ್ಧ ಮುಸ್ಲಿಂ ಹೆಣ್ಣುಮಕ್ಕಳು ವಿದ್ಯಾವಂತರಾಗಿ ಸೂಕ್ತ ಉತ್ತರ ನೀಡಬೇಕಾಗಿದೆ. ನೀವು ಬೆಳೆಯುವ ಮೂಲಕ ನಿಮ್ಮ ಸಹಪಾಠಿಗಳು ಸಮಾಜ ಸಮುದಾಯ ಬೆಳೆಸುವ ಕೆಲಸ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರಿಸ್ ಕರೆ ನೀಡಿದರು
ಅವರು ಕಾರ್ಕಳದ ಜಾಮಿಯಾ ಮಸೀದಿ ಬಳಿಯ ಒಕ್ಕೂಟದ ಕಚೇರಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ ) ಕಾರ್ಕಳ ತಾಲೂಕು ಘಟಕದ ವತಿಯಿಂದ ನಡೆದ 2022- 23ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಸನ್ಮಾನ ಸಮ್ಮಾನವನ್ನು ಸ್ವೀಕರಿಸುವ ಮೂಲಕ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಕಲಿಸಿ ನಿಮ್ಮೊಂದಿಗೆ ಅವರ ಪ್ರತಿಭೆಯನ್ನು ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ಆ ಮೂಲಕ ಮಾದರಿಯಾಗಿ ಬೆಳೆಯಿರಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಗ್ಲೆಗುಡ್ಡೆ ತ್ವಯಿಭಾ ಗಾರ್ಡನ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೌಲನ ಅಹ್ಮದ್ ಶರೀಫ್ ಸಹದಿ ಕಿಲ್ಲೂರ್ ರವರು,ವಿದ್ಯೆಗೆ ಮತ್ತು ವಿದ್ಯಾವಂತರಿಗೆ ಸಮಾಜದಲ್ಲಿ ಮಾನ್ಯತೆ ಸಿಗುತ್ತದೆ ಮಾತ್ರವಲ್ಲ ವಿದ್ಯೆಗೆ ಮಹತ್ವ ಹಾಗೂ ಪ್ರೋತ್ಸಾಹ ನೀಡಿದವರು ಮಾತ್ರ ಅನಾದಿ ಕಾಲದಿಂದಲೂ ಇತಿಹಾಸದ ಪುಟಗಳಲ್ಲಿ ಉಳಿದುಕೊಂಡಿದ್ದಾರೆ ವಿದ್ಯೆಗೆ ಮುಸ್ಲಿಂ ಒಕ್ಕೂಟ ನೀಡುವ ಮಹತ್ವ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯೂ ಸಿ ಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್ ಮಿಯ್ಯಾರು ಉಪಸ್ಥಿತರಿದ್ದರು
ಕಾರ್ಕಳ ಮುಸ್ಲಿಮ್ ಜಮಾತ್ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಪ್ರಾಸ್ತವಿಕವಾಗಿ ಮಾತನಾಡಿದರು
ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್ ಶರೀಫ್ ಅತಿಥಿಗಳನ್ನು ಪರಿಚಯಿಸಿದರು ಸಮದ್ ಖಾನ್ ಕಾರ್ಯಕ್ರಮ ನಿರೂಪಿಸಿದರು
ತಾಲೂಕು ಕಾರ್ಯದರ್ಶಿ ಮಮತಾಜ್ ಹಸನ್ ವಂದಿಸಿದರು. ಮಾಜಿ ಕಾರ್ಯದರ್ಶಿ ಅಬ್ದುಲ್ ರಶೀದ್, ಸಯ್ಯದ್ ಅಬ್ಬಾಸ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು