ಮೂಲ್ಕಿ: ಶಾಲಾ ಸಂಸತ್ ಮಕ್ಕಳಿಗೆ ಭವಿಷ್ಯವನ್ನು ರೂಪಿಸಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುವುದರ ಜೊತೆಗೆ ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಂಬಳ ಅಕಾಡೆಮಿಯ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಕೆ ಗುಣಪಾಲ ಕಡಂಬ ಹೇಳಿದರು.
ಅವರು ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಕಾಲೇಜಿನ ಸಂಸತ್ ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಸತ್ ನ ಮಂತ್ರಿ ಮಂಡಲಕ್ಕೆ ಪ್ರತಿಜ್ಞಾ ವಿದಿ ಬೋದಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಬಾಲಚಂದ್ರ ಸನಿಲ್,ಟ್ರಸ್ಟಿ ಹಾಗೂ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ,ಟ್ರಸ್ತಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್,ಪ್ರಜ್ಞಾ ಕೋಟ್ಯಾನ್,ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಶೆಟ್ಟಿ,ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯತೀಶ್ ಅಮೀನ್,ಕಾಲೇಜಿನ ವಿದ್ಯಾರ್ಥಿ ನಾಯಕ ಅವಿನ್ ಪೂಜಾರಿ ಫ್ರೌಢ ಶಾಲೆಯ ವಿದ್ಯಾರ್ಥಿ ನಾಯಕ ಅಮಿಷ್ ಶೆಟ್ಟಿ,ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ,ಸಂಸತ್ ಮಂತ್ರಿ ಮಂಡಲ,ಸ್ಪೀಕರ್,ಡೆಪ್ಯುಟಿ ಸ್ಪೀಕರ್ ಮತ್ತಿತರರು ಉಪಸ್ಥಿತರಿದ್ದರು.
ಬಾಲಚಂದ್ರ ಸನಿಲ್ ಸ್ವಾಗತಿಸಿ,ಯತೀಶ್ ಅಮೀನ್ ವಂದಿಸಿದರು,ಉಪನ್ಯಾಸಕ ಗಂಗಾಧರ್ ಪೂಜಾರಿ ನಿರೂಪಿಸಿದರು.