ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಸತಿ ನಿಲಯದ ವಿದ್ಯಾರ್ಥಿಗಳು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಶಾಲೆ ಉಪ್ಪೂರು ಇಲ್ಲಿಗೆ ಭೇಟಿ ನೀಡಿ, ಅಕ್ಕಿ ಮತ್ತು ಫಲವಸ್ತು, ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಮುಖ್ಯಸ್ಥೆ ಅಪರ್ಣಾ ಆಚಾರ್ ಮಾತನಾಡಿ ದೇವರು ನಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ ನಾವು ವಿದ್ಯಾವಂತರಾಗಿ ಸಂಸ್ಕಾರಯುತ ಶಿಕ್ಷಣ ಪಡೆದು ಸಮಾಜ ಸೇವೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅಮೃತಭಾರತಿ ವಸತಿನಿಲಯದ 60 ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರಾದ ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿ, ವೇದವ್ಯಾಸ ತಂತ್ರಿ ಮಡಾಮಕ್ಕಿ, ಮಾತಾಜಿಯವರಾದ ಕುಮಾರಿ ಪಂಚಮಿ, ಮೀನಾಕ್ಷಿ, ಸುಚಿತ್ರಾ, ವಾಹನ ಚಾಲಕರಾದ ವಸಂತ ಉಪಸ್ಥಿತರಿದ್ದರು.
ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿಶಾಲೆಯ ಮುಖ್ಯಸ್ಥರಾದ ಜನಾರ್ದನ ಸ್ವಾಗತಿಸಿದರು. ಬೌದ್ಧಿಕ ದಿವ್ಯಾಂಗ ವಿದ್ಯಾರ್ಥಿಗಳು ಹಾಡು ನೃತ್ಯ ಪ್ರದರ್ಶನವನ್ನಿತ್ತು ಮನರಂಜಿಸಿದರು. ವೇದವ್ಯಾಸ ತಂತ್ರಿ ಮಡಾಮಕ್ಕಿ ಧನ್ಯವಾದವಿತ್ತರು.