ಕಾರ್ಕಳ : ಇನ್ನಾ ಗ್ರಾಮದ ಯುವ ಕಾಂಗ್ರೇಸ್ ನ ಯಾವುದೇ ಪದಾಧಿಕಾರಿಗಳು,ಬೂತ್ ಅಧ್ಯಕ್ಷರು, ಬಿಜೆಪಿಗೆ ಸೇರ್ಪಡೆಯಾಗಿಲ್ಲ. ರಂಜಿತ್ ಸಫಲಿಗ ನಮ್ಮ ಗ್ರಾಮದ ಎರಡನೇ ಬೂತ್ ಯುವ ಅಧ್ಯಕ್ಷನಾಗಿದ್ದು , ಪ್ರಸಾದ್ ಕುಂದರ್ ಇನ್ನಾ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಇವರಿಬ್ಬರೂ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಸ್ಪಷ್ಟನೆ ನೀಡಿದ್ದಾರೆ.
ಪಂಚಾಯತ್ ಚುನಾವಣೆಯ ಹೀನಾಯ ಸೋಲಿನ ನಂತರ ಹತಾಶೆಗೊಳಗಾಗಿ ಸ್ಥಳೀಯ ನಾಯಕರು ತಮ್ಮ ನಾಯಕರ ಮುಂದೆ ಇರುವಿಕೆಯನ್ನು ತೋರಿಸಲು ಕೆಲ ಬಿಜೆಪಿಯ ಕಾರ್ಯಕರ್ತರನ್ನೇ ಮತ್ತೆ ಬಿಜೆಪಿಗೆ ಹಾಗೂ ನಮ್ಮ ಕಾರ್ಯಕರ್ತರನ್ನು ಸೆಳೆದು ಅವರೇ ಕಾಂಗ್ರೆಸ್ ಪಕ್ಷದ ಹುದ್ದೆಗಳನ್ನು ಸೃಷ್ಟಿಸಿ ಪಕ್ಷಾಂತರ ಮಾಡುವಂತೆ ಬಿಂಬಿಸುತಿದ್ದಾರೆ.
ಮುAದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುವುದು ನಿಶ್ಚಿತ. ಬಿಜೆಪಿಯವರು ಬಿಜೆಪಿಯ ವಿರುದ್ದವೇ ತಿರುಗಿಬಿದ್ದಿದ್ದು, ಅದರಲ್ಲೂ ಹಿಂದೂ ಸಂಘಟನೆಯ ಕಾರ್ಯಕರ್ತರು ಡೋಂಗಿ ನಾಯಕರ ವಿರುದ್ದ ತಿರುಗಿಬಿದ್ದಿದ್ದು, ಸೋಲಿನ ಭಯದಿಂದ ಈ ರೀತಿಯ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಯೋಗೀಶ್ ಆಚಾರ್ಯ ಇನ್ನಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.