ಅಜೆಕಾರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು ಗ್ರಾಮೀಣ ಕಾಂಗ್ರೆಸ್ ಸಮಿತಿ ಕಡ್ತಲ, ಕುಕ್ಕುಜೆ,ಎಳ್ಳಾರೆ ವತಿಯಿಂದ ಕಡ್ತಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವ ದೇವಾಡಿಗ, ಹಿರಿಯರಾದ ಸಂಪತ್ ಕುಮಾರ್ ಜೈನ್, ಬೋಜ ಪೂಜಾರಿ, ಆನಂದ್ ನಾಯಕ್, ಶಂಕರ್ ಮಡಿವಾಳ, ಗಣಪತಿ ಪ್ರಭು, ವಿಠ್ಠಲ್ ನಾಯಕ್, ಪುರಂದರ ನಾಯಕ್, ಪ್ರಸನ್ನ ದೇವಾಡಿಗ, ರವೀಂದ್ರ ಕುಲಾಲ್, ಪ್ರಕಾಶ್ ನಾಯಕ್, ರವಿ ಕುಲಾಲ್, ಪ್ರವೀಣ್ ಕುಲಾಲ್, ಸತ್ಯೇಂದ್ರ ಪೂಜಾರಿ, ರವಿ ನಾಯ್ಕ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.