ಕಾರ್ಕಳ: ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಶಾಸಕ, ಸಚಿವ ವಿ ಸುನಿಲ್ ಕುಮಾರ್ ಪೂರಕ ಆಡಳಿತ ನೀಡಿದ್ದರು. ಕಾರ್ಕಳದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾರ್ಕಳಕ್ಕೆ ತಂದು, ಎಲ್ಲ ಜಾತಿ-ಸಮುದಾಯದವರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಬಿಜೆಪಿಯದ್ದು ಹಿಂದುತ್ವ, ಅಭಿವೃದ್ಧಿ ಅಜೆಂಡಾ ಆಗಿದ್ದರೆ, ಕಾಂಗ್ರೆಸ್ಸಿಗರು ಜಾತಿ ಮತ್ತು ಅಪಪ್ರಚಾರದಲ್ಲಿ ತೊಡಗಿ ಮತಯಾಚಿಸುತ್ತಿದ್ದಾರೆ. ಕ್ಷೇತ್ರದ ಜನ ಕ್ಷೇತ್ರದಲ್ಲಿ ಆದ ಬದಲಾವಣೆಗಳನ್ನು ಅರಿತು ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಅವರನ್ನು ಈ ಬಾರಿ ಬೆಂಬಲಿಸುವAತೆ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ ಕರೆ ನೀಡಿದರು.
ಅವರು ಕೈರಬೆಟ್ಟುವಿನಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಕ್ಷೇತ್ರದ ಜನರ ಆಶೋತ್ತರಗಳಿಗೆ ಸುನಿಲ್ ಸ್ಪಂದಿಸಿದ್ದಾರೆ, ಕಾರ್ಕಳದ ಹೆಸರು ವಿಶ್ವಕ್ಕೆ ವಿಸ್ತರಿಸಿದೆ. ಅವರ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದ ಜನರಷ್ಟೆ ಅಲ್ಲ ಇಡೀ ನಾಡು ಕೊಂಡಾಡುತ್ತಿದೆ. ಆದರೆ ಇಲ್ಲಿನ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ. ಜಾತಿ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ. ಸುನಿಲ್ರವರ ದೂರದೃಷ್ಟಿಯ ಯೋಜನೆಗಳಿಂದ ಸ್ವರ್ಣ ಕಾರ್ಕಳದ ಕಲ್ಪನೆ ಸಾಕಾರಗೊಳ್ಳುತ್ತಿದೆ. ಅಂತಹ ಹೊಸತನ ಸೃಷ್ಟಿಸುವ ಸರ್ವ ಸಮುದಾಯದ ಅಭಿವೃದ್ಧಿಗೆ ಚಿಂತಿಸುವ ಅಭ್ಯರ್ಥಿಗೆ ಎಲ್ಲರ ಬೆಂಬಲ ಅಗತ್ಯ. ಕ್ಷೇತ್ರದಲ್ಲಿ ಈ ವರೆಗೂ ಕಾಣದ ಕಾಂಗ್ರೆಸ್ ಈಗ ಜಾತಿ, ಅಪಪ್ರಚಾರ ಹೆಸರಿನಲ್ಲಿ ಮನೆಬಾಗಿಲು ಬಡಿಯುತ್ತಿದೆ. ಅವರ ಗ್ಯಾರಂಟಿ ಕಾರ್ಡ್ ಬಿಡಿ ಅವರಿಗೆ ಗ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡಿದರು.
ಸಭೆಯಲ್ಲಿ ಅಭ್ಯರ್ಥಿ ವಿ ಸುನಿಲ್ಕುಮಾರ್,ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು