ಕಾರ್ಕಳ : ಪ್ರತಿಪಕ್ಷನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಟಿಪ್ಪುವನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕೆಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಡಾ.ಅಶ್ವಥ್ ನಾರಾಯಣ ತನ್ನ ಹುದ್ದೆಯ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಆಗ್ರಹಿಸಿದ್ದಾರೆ.
ಅಶ್ವಥ್ಥ ನಾರಾಯಣರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವAತೆ ಸಿಎಂ ಬೊಮ್ಮಾಯಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ರಾಜ್ಯದಲ್ಲಿ ಚುನಾವಣಾಪೂರ್ವ ಗಲಭೆಯನ್ನು ಹುಟ್ಪು ಹಾಕಿ ಬಿಜೆಪಿ ತನ್ನ ರಾಜಕೀಯದ ಬೇಳೆ ಬೇಯಿಸುವ ಗುರಿಯನ್ನು ಹೊಂದಿದೆ. ಕಾರ್ಯಕರ್ತರು ಟಿಪ್ಪುವನ್ನು ಕೊಂದ ಉರಿಗೌಡ ನಂಜೆಗೌಡರAತಾಗಬೇಕು ಎಂಬ ಸಚಿವರ ಹೇಳಿಕೆ ಮತ್ತು ಟಿಪ್ಪುವನ್ನು ಪ್ರೀತಿಸುವವರು ಈ ನೆಲದಲ್ಲಿ ಇರಬಾರದು ಎಂಬ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸಂವಿಧಾನ ಬಾಹಿರ ನಡೆಯಾಗಿದ್ದು, ಶಾಂತಿ ಸುವ್ಯವಸ್ಥೆಯ ಹೊಣೆಹೊತ್ತ ರಾಜ್ಯದ ಸಾಂಸ್ಥಿಕ ಸಂಸ್ಥೆಗಳು ಇವರ ವಿರುದ್ದ ಸ್ವಯಂ ಪ್ರೇರಿತ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು.
ಬಿಜೆಪಿ ಆಡಳಿತದಲ್ಲಿ ರಾಜಧರ್ಮ ಕುಲಗೆಟ್ಟು ಹೋಗಿರುವುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿ. ಇದೊಂದು ಪುಂಡಾಟಿಕೆಯ ಸರಕಾರ. ಕೊಲೆಯತ್ನ, ಗುಂಪುಗಲಭೆ, ವಂಚನೆ, ಭ್ರಷ್ಟಾಚಾರ, ಶೋಷಣೆ, ಸುಲಿಗೆ, ಮತಾಂಧತೆಯೇ ಮೊದಲಾದ ಸಮಾಜಘಾತುಕ ಶಕ್ತಿಗಳಿಗೆ ಪ್ರಚೋದನೆ ನೀಡುವ ಸರಕಾರ. ಈಗಾಗಲೆ ಮಾಜಿ ಸಚಿವ ಈಶ್ವರಪ್ಪ , ಸಿಟಿ ರವಿಯೂ ಸೇರಿದಂತೆ ಒಟ್ಟು 33 ಹಾಲಿ ಸಚಿವರು ಹಾಗೂ ಶಾಸಕರ ಮೇಲೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಇವೆ. ಇಂತ ಸರಕಾರದಲ್ಲಿ ಸಚಿವನಾಗಿರುವವನೊಬ್ಬ , ಒಬ್ಬ ಸಮರ್ಥ ಜನಪರ ಚಿಂತಕ ಸಿದ್ಧರಾಮಯ್ಯನಂತವರನ್ನು ಹೊಡೆದು ಹಾಕಲು ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಸಚಿವರಿರುವ ಸರಕಾರ ರಾಜ್ಯವಾಳಲು ಯೋಗ್ಯವಲ್ಲ ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.