ಮೈಸೂರು: ಸಂಸದ ಪ್ರತಾಪ್ ಸಿಂಹ ಕುರಿತಂತೆ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿ ಇಲಾಖೆ ನಿಯಮ ಉಲ್ಲಂಘಿಸಿರುವ ಹಿನ್ನಲೆಯಲ್ಲಿ ಮೈಸೂರಿನ ವಿವಿ ಪುರಂ ಠಾಣೆಯ ಟ್ರಾಫಿಕ್ ಹೆಡ್ ಕಾನ್ಸ್ಸ್ಟೇಬಲ್ ಬಿ. ಪ್ರದೀಪ್ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್ ಆದೇಶಿಸಿದ್ದಾರೆ
ನಗರದ ವಿವಿ.ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಿ.ಪ್ರದೀಪ್ ಎಂಬಾತ ಸಂಸದ ಪ್ರತಾಪ್ ಸಿಂಹ ವಿರುದ್ಧ ಹಾಕಲಾಗಿದ್ದ ಪೋಸ್ಟ್ ಗೆ ಅವಹೇಳನಕಾರಿ ಕಮೆಂಟ್ ಹಾಕಿದ್ದ, ಇದರಿಂದ ಸಂಸದ ಪ್ರತಾಪ್ ಸಿಂಹ ಅಭಿಮಾನಿಗಳು ಕರೆಳಿದ್ದರು, ಅಲ್ಲದೇ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.ಇದಾದ ಬಳಿಕ ಪ್ರತಾಪ್ ಸಿಂಹ ಪ್ರದೀಪ್ ಹಾಕಿದ್ದ ಅವಹೇಳನಕಾರಿ ಕಮೆಂಟಿನ ಸ್ಕ್ರೀನ್ ಶಾಟ್ ಸೇರಿಸಿ ಪೇದೆ ಬಿ.ಪ್ರದೀಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರತೀ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಮುಖ್ಯ ಪೇದೆ ಬಿ.ಪ್ರದೀಪ್ ಅವರನ್ನು ತಕ್ಷಣದಿಂದಲೇ ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬನೋತ್ ಆದೇಶಿಸಿದ್ದಾರೆ.