Share this news

 

 

 

ಕಾರ್ಕಳ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ  ಜನರ ಎರಡು ದಶಕಗಳ ಬೇಡಿಕೆಯಾಗಿದ್ದ ಹಾಗೂ ಹಲವು ಕಾರಣಗಳಿಂದಾಗಿ ಬಾಕಿ ಉಳಿದಿದ್ದ ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಲೆಕುಡಿಯ ಕಾಲೋನಿ ಮತ್ತಾವು ಸಂಪರ್ಕಿಸುವ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2 ಕೋಟಿ ಅನುದಾನ ಮಂಜೂರಾಗಿದೆ.ಕಳೆದ ಎರಡು ದಶಕಗಳಿಂದ ಅರಣ್ಯ ಇಲಾಖೆಯ ಬಿಗಿಯಾದ ಕಾನೂನು ತೊಡಕುಗಳನ್ನು ನಿವಾರಿಸಿದ ಪರಿಣಾಮ ಅರಣ್ಯ ಹಕ್ಕು ಕಾಯಿದೆಯ ಅನ್ವಯ ಇಂದು ಸೇತುವೆ ನಿರ್ಮಾಣದ ಕನಸು ನನಸಾಗಿದೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಪೂರ್ಣಪ್ರಮಾಣದ ಅನುದಾನ ಬಿಡುಗಡೆಯಾಗದ ಆರೋಪದ ನಡುವೆಯೂ ಈ ಕಾಮಗಾರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆದ್ಯತೆ ನೆಲೆಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ.

ಕಬ್ಬಿನಾಲೆ ಗ್ರಾಮದ ಮತ್ತಾವು ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ಸಂದರ್ಭದಲ್ಲಿ ಕಾಡಿನ ಮಧ್ಯ ಹರಿಯುವ ನದಿಯನ್ನು ದಾಟಲು ತುಂಬಾ ಅಪಾಯಕಾರಿಯಾದ ಕಾಲುಸಂಕ ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ಈ ಪ್ರದೇಶದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಸೇತುವೆ ಸಹಿತ ರಸ್ತೆ ಅಭಿವೃದ್ಧಿಯು ತೀರಾ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಮತ್ತಾವು ಕಾಲೊನಿ ಸಂಪರ್ಕಕ್ಕಾಗಿ ಸರ್ಕಾರದಿಂದ 2 ಕೋ. ರೂ ಅನುದಾನ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸೇತುವೆ ನಿರ್ಮಾಣದಿಂದಾಗಿ ಮಲೆಕುಡಿಯ ಸಮುದಾಯದವರ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ.ಅರಣ್ಯ ಇಲಾಖೆಯ ಕಾನೂನು ತೊಡಕನ್ನು ನಿವಾರಿಸಿ ವಿಶೇಷ ಮುತುವರ್ಜಿಯಿಂದಾಗಿ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲನಿ ಸಂಪರ್ಕಕ್ಕಾಗಿನ ನೂತನ ಸೇತುವೆ ಹಾಗೂ ರಸ್ತೆ ಕಾಮಗಾರಿಯು ಅತೀ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದೆಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *