Month: March 2024

ಲೋಕಸಭಾ ಟಿಕೆಟ್ ಕೈತಪ್ಪಿದ ಹಿನ್ನಲೆ:ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂಕಟ! ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ತೇಜಸ್ವಿನಿ ಗೌಡ

ಬೆಂಗಳೂರು:ಬಿಜೆಪಿಯ ಫೈರ್ ಬ್ರಾಂಡ್ ಖ್ಯಾತಿಯ ತೇಜಸ್ವಿನಿ ಗೌಡ ಅವರು ಲೋಕಸಭಾ ಟಿಕೆಟ್ ಸಿಗ ದ ಕಾರಣದಿಂದ ಬಿಜೆಪಿ ವಿರುದ್ಧ ಬೇಸತ್ತು ತಮ್ಮ ಪರಿಷತ್ ಸದಸ್ಯಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಟಿಕೆಟ್ ಹಂಚಿಕೆ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ ಸಧ್ಯಕ್ಕೆ…

ಹಿರ್ಗಾನ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ

ಕಾರ್ಕಳ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಎಂಬಲ್ಲಿ ನಡೆದಿದೆ. ಚಿಕ್ಕಲ್‌ಬೆಟ್ಟು ನಿವಾಸಿ ಜಯಂತಿ (58) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಕಳೆದ ಹಲವು ಸಮಯದಿಂದ…

ಕೋಲಾರ ಕಾಂಗ್ರೆಸ್ ನಲ್ಲಿ ಉಲ್ಬಣಿಸಿದ ಬಂಡಾಯದ ಬೇಗುದಿ: ರಾಜೀನಾಮೆಗೆ ಮುಂದಾದ ರಮೇಶ್ ಕುಮಾರ್ ಬಣದ ಐವರು ಶಾಸಕರು!

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ಗೆ ದೊಡ್ಡ ಆಘಾತ ಎದುರಾಗಿದ್ದು, ಕೋಲಾರ ಲೋಕಸಭೆಗೆ ಕೆ.ಹೆಚ್ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಐವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:27.03.2024, ಬುಧವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಶಿಶಿರ ಋತು,ಮೀನ ಮಾಸ, ಕೃಷ್ಣ ಪಕ್ಷ,ನಕ್ಷತ್ರ: ಚಿತ್ರಾ, ರಾಹುಕಾಲ- 12:36 ರಿಂದ 02:08 11:05 ರಿಂದ 12:36 ಸೂರ್ಯೋದಯ (ಉಡುಪಿ) 06:31 ಸೂರ್ಯಾಸ್ತ – 06:40 ರಾಶಿ ಭವಿಷ್ಯ: ಮೇಷ ರಾಶಿ:…

ಕಾಡುಹೊಳೆ: ಮಾ 27,28ರಂದು ನಾಗಶಿಲಾ ಪುನಃಪ್ರತಿಷ್ಠೆ, ಚತುಃಪವಿತ್ರ ನಾಗಮಂಡಲೋತ್ಸವ

ಕಾರ್ಕಳ:ಮರ್ಣೆ ಗ್ರಾಮದ ಕಾಡುಹೊಳೆ ಕೋಟೆಬೈಲು ನಾಗಬನದ ಜೀರ್ಣೋದ್ಧಾರದ ಪ್ರಯುಕ್ತ ಮಾ.27 ಹಾಗೂ 28ರಂದು ನಾಗಶಿಲಾ ಪುನಃಪ್ರತಿಷ್ಠೆ ಹಾಗೂ ಚತುಃಪವಿತ್ರ ನಾಗಮಂಡಲೋತ್ಸವವು ಕಾಡುಹೊಳೆ ವೆಂಕಟರಮಣ ಭಟ್ ಹಾಗೂ ಸಾಂತ್ಯಾರು ವೇ.ಮೂ ಲಕ್ಷ್ಮೀಪ್ರಸಾದ್ ಭಟ್ ನೇತೃತ್ವದಲ್ಲಿ ನಡೆಯಲಿದೆ. ಮಾ 27ರಂದು ಬುಧವಾರ ಬೆಳಗ್ಗೆ 8.30ರಿಂದ…

ಎಣ್ಣೆಹೊಳೆ: ಸ್ಕೂಟರಿಗೆ ಕಾರು‌ ಡಿಕ್ಕಿ: ಸವಾರ ಸಹಿತ ಮೂವರಿಗೆ ಗಾಯ

ಕಾರ್ಕಳ: ಕಾರು ಚಾಲಕ ಓವರ್’ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸೇರಿದಂತೆ ಮೂವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಎಂಬಲ್ಲಿ ಸೋಮವಾರ ನಡೆದಿದೆ. ಸ್ಕೂಟರ್ ಸವಾರ ಮೊಹಮ್ಮದ್ ರಶೀದ್ ,ಅವರ ತಾಯಿ ಅವ್ವಮ್ಮ ಹಾಗೂ ಮಗ…

ಮನೆಯ ಸಿಟೌಟಿನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ: ಬಿಹಾರ ಮೂಲದ ಕಾರ್ಮಿಕ ಗಂಭೀರ

ಉಡುಪಿ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟು ಎಂಬಲ್ಲಿ ರಾತ್ರಿ ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕ ಸುರೇಂದ್ರ (55 ವ) ಗಾಯಗೊಂಡ ವ್ಯಕ್ತಿ.…

ಲೋಕಸಭಾ ಚುನಾವಣೆಗೂ ಮುನ್ನ ಮಂಜುನಾಥನ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್! ಪ್ರತೀ ಬಾರಿ ಧರ್ಮಯುದ್ದ ಆರಂಭಕ್ಕೂ ಮುನ್ನ ಮಂಜುನಾಥನ ದರ್ಶನ ಪಡೆಯುತ್ತೇನೆ

ಧರ್ಮಸ್ಥಳ: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಿಢೀರ್ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಮಂಜುನಾಥನ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ನಾನು ಪ್ರತೀ ಸಲವೂ ಧರ್ಮ ಯುದ್ಧದ…

ಕಾರ್ಕಳ: ಟೈಮಿಂಗ್ಸ್ ವಿಚಾರದಲ್ಲಿ ಬಸ್ ಅಡ್ಡಗಟ್ಟಿ ನಡುರಸ್ತೆಯಲ್ಲೇ ಕಿತ್ತಾಡಿದ ಚಾಲಕರು!

ಕಾರ್ಕಳ: ಬಸ್ಸಿನ ಟೈಮಿಂಗ್ಸ್ ವಿಚಾರದಲ್ಲಿ ಚಾಲಕರಿಬ್ಬರು ನಡುರಸ್ತೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಸಾಣೂರು ಗ್ರಾಮದ ನಿವಾಸಿ ವಿಠಲ ರಾವ್ ಕಾರ್ಕಳ ಮಂಗಳೂರು ರೂಟಿನ ಬಸ್ ಚಾಲಕರಾಗಿದ್ದು, ಸೋಮವಾರ ಮಧ್ಯಾಹ್ನ ಕಾರ್ಕಳದಿಂದ ಮಂಗಳೂರಿಗೆ ಬಸ್ಸು ಚಲಾಯಿಸಿಕೊಂಡು ಕಾರ್ಕಳ ಪುಲ್ಕೇರಿ ಬಳಿ ತಲುಪಿದಾಗ ಹಿಂದಿನಿಂದ ಬಂದ…

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ: ಪ್ರಜಾತಂತ್ರ ವ್ಯವಸ್ಥೆಯಡಿಯ ವಂಚಿತವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವುದೇ ಜಾತಿ ಗಣತಿಯ ಗುರಿ: ಜಯಪ್ರಕಾಶ್ ಹೆಗ್ಡೆ

ಕಾರ್ಕಳ:ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಂಡಿಸಿರುವ ಕಾಂತರಾಜು ವರದಿ ಪ್ರಜಾತಂತ್ರ ವ್ಯವಸ್ಥೆಯಡಿಯ ವಂಚಿತವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆಯೇ ಹೊರತು, ಸಮಾಜದ ಯಾವುದೇ‌ ಜಾತಿ ಅಥವಾ ವರ್ಗವನ್ನು ಅವಗಣಿಸುವ ಅಸಾಂವಿಧಾನಿಕ ನಿಲುವನ್ನು ಹೊಂದಿಲ್ಲವೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ…