Month: July 2024

ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡದೇ ಅಭಿವೃದ್ಧಿ ಹರಿಕಾರ ಸುನಿಲ್ ಕುಮಾರ್ ಅವಹೇಳನದ ಮೂಲಕ ಕಾಂಗ್ರೆಸ್ ನೀಚ ರಾಜಕಾರಣ: ಬಿಜೆಪಿ ಮುಖಂಡ ಮಹಾವೀರ ಹೆಗ್ಡೆ

ಕಾರ್ಕಳ:ಕಳೆದ ಬಾರಿ ಕಾರ್ಕಳದಲ್ಲಿ ಸೋಲಿನ ಹತಾಶೆಯಿಂದ ಚೇತರಿಸಿಕೊಳ್ಳದ ಕಾಂಗ್ರೆಸ್ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಅಡ್ಡಗಾಲು ಇಟ್ಟು, ಇದೀಗ ಜಿಲ್ಲಾ ಪಂಚಾಯತ್ ಚುನಾವಣೆಗೆ ರಂಗ ತಾಲೀಮು ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿಯ ಹರಿಕಾರ ಸುನಿಲ್ ಕುಮಾರ್ ಅವರನ್ನು ಅವಹೇಳನ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ…

ಕಾರ್ಕಳ ತಾಲೂಕಿನಾದ್ಯಂತ ಭಾರೀ ಗಾಳಿಮಳೆಗೆ ಅಪಾರ ಹಾನಿ: ಪ್ರವಾಹದಿಂದ ನೂರಾರು ಎಕರೆ ಕೃಷಿ ಜಮೀನಿಗೆ‌ ನುಗ್ಗಿದ ನೆರೆ ನೀರು

ಕಾರ್ಕಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಪ್ರವಾಹದಿಂದ ನೂರಾರು ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿದೆ. ತಾಲೂಕಿನ ಶಿರ್ಲಾಲು ಗ್ರಾಮದ ಸಂಜೀವ ಪ್ರಭು ಎಂಬವರ ಅಡಿಕೆ ತೋಟವು ಭಾರಿ ಗಾಳಿಯಿಂದ…

ಮಂಗಳೂರು: ವಿದೇಶಿ ಕಂಪೆನಿಯ ಉದ್ಯೋಗ ಸಂದರ್ಶನ|ನಿರುದ್ಯೋಗಿಗಳಿಗೆ ಸುವರ್ಣಾವಕಾಶ

ದಕ್ಷಿಣ ಕನ್ನಡ: ಮಂಗಳೂರಿನ ಪ್ರತಿಷ್ಟಿತ ಭಾರತ ಸರಕಾರದ ವಿದೇಶಾಂಗ ಇಲಾಖೆಯ ಅಂಗೀಕೃತ ಸಂಸ್ಥೆಯಾದ ನೂರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವಿದೇಶಿ ಕಂಪೆನಿಯ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಜು.22 ರಂದು ನಡೆಯಲಿದೆ. ಸಂದರ್ಶನವು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ನಡೆಯಲಿದ್ದು,…

ಕಡ್ತಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಗೋಪಾಲ ಪೂಜಾರಿ, ಕಾರ್ಯದರ್ಶಿಯಾಗಿ ಶೇಖರ ಕಡ್ತಲ ಆಯ್ಕೆ

ಕಾರ್ಕಳ: ತಾಲೂಕಿನ ಕಡ್ತಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆಯು ಕಡ್ತಲ ಸಮಾಜ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಪುರಂದರ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ 37ನೇ ವರ್ಷದ ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಕಡ್ತಲ ಹಾಗೂ ಕಾರ್ಯದರ್ಶಿಯಾಗಿ ಶೇಖರ್ ಕಡ್ತಲ ಆಯ್ಕೆಯಾಗಿದ್ದಾರೆ.…

ಕಾರ್ಕಳ ವಕೀಲರ ಸಂಘದ ವತಿಯಿಂದ ಪರಿಸರ ದಿನಾಚರಣೆ

ಕಾರ್ಕಳ: ವಕೀಲರ ಸಂಘ (ರಿ) ಕಾರ್ಕಳ ಇದರ ವತಿಯಿಂದ ಕಾರ್ಕಳ ವಕೀಲರ ಸಂಘದ ಆವರಣದಲ್ಲಿ ಮಂಗಳವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಶ್ರೀನಿವಾಸ್ ಸುವರ್ಣ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಬುತಾಹಿರ್ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ…

ಮೂಡುಬಿದಿರೆ: ಆಗುಂಬೆ ಎಸ್. ನಟರಾಜ್ ಮತ್ತು ಶ್ರೀಧರ ಬನವಾಸಿ ಅವರಿಗೆ ವರ್ಧಮಾನ ಪ್ರಶಸ್ತಿ

ಮೂಡುಬಿದಿರೆ :ಕಳೆದ 43 ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2023ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಆಗುಂಬೆ ಎಸ್. ನಟರಾಜ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಶ್ರೀಧರ ಬನವಾಸಿ ಅವರಿಗೆ ವರ್ಧಮಾನ…

ಇವಿಎಂ ಹ್ಯಾಕ್ ಮಾಡಲಾಗುತ್ತದೆ ಎನ್ನುವವರಿಗೆ ಆಯೋಗದ ಸವಾಲು: ಅಭ್ಯರ್ಥಿಗಳು ಇಚ್ಚಿಸಿದ ಇವಿಎಂ ಪರಿಶೀಲನೆಗೆ ಅವಕಾಶ!

ನವದೆಹಲಿ: ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ತಮ್ಮ ಸೋಲಿನ ಬಳಿಕ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿದ ಪರಿಣಾಮ ಸೋಲಾಗಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಆರೋಪಿಸುವುದು ಸಾಮಾನ್ಯವಾಗಿದೆ. ಯಾವುದೇ ಕಾರಣಕ್ಕೂ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಆಯೋಗ ಪ್ರಾತ್ಯಕ್ಷಿಕೆ ಮಾಡಿ ಸವಾಲೊಡ್ಡಿದ್ದರೂ…

ನಾಲ್ಕೂರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ನಿವಾಸಿ ಸುರೇಂದ್ರ ಯಾನೆ ಸುರೇಶ (55ವ) ಆತ್ಮಹತ್ಯೆ ಮಾಡಿಕೊಂಡವರು. ಸುರೇಂದ್ರ ಅವರು ಮಾನಸಿಕ ಖಿನ್ನತೆಯಿಂದ ಮನನೊಂದು ಮನೆಯ ಸಮೀಪದ ಗದ್ದೆಯ…

ಉಡುಪಿ ಅಗ್ನಿದುರಂತ ಪ್ರಕರಣ: ಚಿಕಿತ್ಸೆ ಫಲಿಸದೇ ಬಳ್ಳಾಲ್ ಕಾಬೂಸ್ ರೀಲ್ಸ್ ಖ್ಯಾತಿಯ ಅಶ್ವಿನಿ ಶೆಟ್ಟಿ ಸಾವು: ಪತಿಯ ಜತೆ ಪತ್ನಿಯೂ ದಾರುಣ ಸಾವು;ತಬ್ಬಲಿಯಾದ ಇಬ್ಬರು ಮಕ್ಕಳು

ಉಡುಪಿ: ಉಡುಪಿ ಗಾಂಧಿನಗರದ ಬಂಗಲೆಯೊಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿದುರಂತದಲ್ಲಿ ಶೆಟ್ಟಿ ಲಂಚ್ ಹೋಮ್ ಮಾಲಕ ಉದ್ಯಮಿ ರಮಾನಂದ ಶೆಟ್ಟಿ ದಾರುಣವಾಗಿ ಮೃತಪಟ್ಟಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರ ಪತ್ನಿ, ಬಿಜೆಪಿ ನಾಯಕಿ ಬಳ್ಳಾಲ್ ಕಾಬೂಸ್ ರೀಲ್ಸ್ ಮಾಡುತ್ತಿದ್ದ ಅಶ್ವಿನಿ…

ಬಜಗೋಳಿ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಕಾರ್ಕಳ : ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಮುಡಾರು ಗ್ರಾಮದ ಬಜಗೋಳಿಯಲ್ಲಿ ಸೋಮವಾರ ನಡೆದಿದೆ. ಬಜಗೋಳಿ ಕುಷ್ಮಾಂಡಿನಿ ಪೆಟ್ರೋಲ್ ಬಂಕ್ ಬಳಿ ಹಾದುಹೋಗಿರುವ ಕಾರ್ಕಳ ಧಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಅಶ್ವಥ್ ಎಂಬವರು…