Month: July 2024

ಶೀಘ್ರದಲ್ಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಬಂದಿದ್ದು, ಶೀಘ್ರವೇ ಹೆಚ್ಚಳ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ತಿಳಿಸಿದರು. ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಸುಳ್ಯದ ಬಿಜೆಪಿ ಸದಸ್ಯೆ ಭಾಗೀರಥಿ ಮುರಳ್ಯ…

ರಾಜ್ಯದ 39 ಲಕ್ಷ ರೈತರಿಗೆ 3500 ಕೋಟಿ ರೂ. ಬೆಳೆ ಹಾನಿ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 38,78,525 ರೈತರಿಗೆ 3535.30 ಕೋಟಿ ರು. ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ…

ಭಾರೀ ಗಾಳಿ ಮಳೆಯ ಹಿನ್ನಲೆ: ಇಂದು(ಜು.25) ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ ತಾಲೂಕಿನ ಶಾಲಾ ಕಾಲೇಜಿಗೆ ರಜೆ

ಕಾರ್ಕಳ: ಕಾರ್ಕಳ, ಹೆಬ್ರಿ, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಗಾಳಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ತರಗತಿಗಳಿಗೆ ಆಯಾ ತಾಲೂಕುಗಳ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ. ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮುನ್ನೆಚ್ಚರಿಕೆ…

ಕಾರ್ಕಳ: ಜಾಗದ ತಕರಾರು: ವ್ಯಕ್ತಿಗೆ ಹಲ್ಲೆ

ಕಾರ್ಕಳ: ಕಾರ್ಕಳ: ಜಾಗ ಮಾರಾಟ ಮಾಡಿದ ವಿಚಾರದ ತಕಾರರಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪ್ರಕರಣ ಕಾರ್ಕಳದ ತೆಳ್ಳಾರು ರಸ್ತೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ. ಕಾರ್ಕಳ ತಾಲೂಕು ತೆಳ್ಳಾರು ರಸ್ತೆ ದಿನೇಶ್ (48) ಎಂಬವರು ಕಾರ್ಕಳ ಕಸಬಾದ ಸ ನಂ…

ಕಂಚಿನಡ್ಕ ಟೋಲ್ ಸಂಗ್ರಹ ಆದೇಶ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ : ಕ.ರ.ವೇ. ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ

ಕಾಪು: ಹಲವು ವಿಫಲ ಪ್ರಯತ್ನಗಳ ಬಳಿಕ ಇದೀಗ ಮತ್ತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹಕ್ಕೆ ಆದೇಶ ನೀಡಿದ ಬಗ್ಗೆ ತಿಳಿದುಬಂದಿದ್ದು, ಜನವಿರೋಧಿ ಅದೇಶವನ್ನು 10 ದಿನದೊಳಗೆ ರದ್ದುಪಡಿಸದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ…

ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಳಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಬಾಡಿಗೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನ ಬಾಡಿಗೆ ಪಾವತಿಗೆ ಅನುದಾನದ ಕೊರತೆಯಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎಲ್.…

ಕಾಂತಾವರ ಯಕ್ಷದೇಗುಲ ಸಂಸ್ಥೆಯ ಯಕ್ಷೋಲ್ಲಾಸ -2024 : ಕಲೆಯನ್ನು ಪ್ರೀತಿಸಿ ಬೆಳೆಯುವ ಕಲಾಸಂಘಟನೆ ಕಲಾಕ್ಷೇತ್ರದ ದೇವಾಲಯದಂತೆ :ಡಾ.ಮಾಧವ ಎಂ.ಕೆ

ಕಾರ್ಕಳ: ಪ್ರಾಮಾಣಿಕ ಪ್ರಯತ್ನದಿಂದ ಸಂಘಟಿಸಿದ ಕಾರ್ಯಕ್ರಮಗಳ ಯಶಸ್ಸು ದೀರ್ಘಕಾಲ ನೆನಪಿಸುತ್ತದೆ. ಮಾಡುವ ಕಾಯಕದಲ್ಲಿ ಸಾಮಾಜಿಕ ಕಳಕಳಿ , ನಿಸ್ವಾರ್ಥ ಭಾವ , ಕಲಾಪ್ರೇಮ , ಇದ್ದರೇನೆ ಫಲವೂ ಸಿದ್ದಿಸುವುದು ಎಂದು ಮಂಗಳೂರಿನ ವಿಶ್ವವಿದ್ಯಾಲಯದ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅದ್ಯಯನ ಪೀಠದ ಸಂಯೋಜಕ…

ಕಾರ್ಕಳ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆವಾಂತರ: ಕುಸಿತದ ಭೀತಿಯಲ್ಲಿ 220 ಕೆವಿ ಹೈ_ಟೆನ್ಶನ್ ವಿದ್ಯುತ್ ಗೋಪುರ: ಅಪಾಯದ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಕಾರ್ಕಳ: ಆಮೆಗತಿಯಲ್ಲಿ ಸಾಗುತ್ತಿರುವ ಕಾರ್ಕಳ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆವಾಂತರ ಮತ್ತೆ ಮುಂದುವರಿದಿದ್ದು, ಸಾಣೂರು ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಗುಡ್ಡ ಅಗೆದ ಪರಿಣಾಮ ಗುಡ್ಡ ಜರಿತದಿಂದ ಈಗಾಗಲೇ ಪಶುವೈದ್ಯ ಆಸ್ಪತ್ರೆ ಕಟ್ಟಡ ಈಗಾಗಲೇ ಧರಾಶಾಯಿಯಾಗಿದ್ದು, ಮತ್ತೆ ಗುಡ್ಡ ಜರಿತಕ್ಕೆ ಪಕ್ಕದಲ್ಲಿರುವ…

ರಾಜ್ಯದ 1,351 ಗ್ರಾಮಗಳಲ್ಲಿ ಭೂಕುಸಿತ ಆತಂಕ: ಭೂವೈಜ್ಞಾನಿಕ ಸಮೀಕ್ಷೆ ವರದಿ; ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಮಾಹಿತಿ

ಬೆಂಗಳೂರು: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 1,351 ಸ್ಥಳಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬುದು ತಿಳಿದುಬಂದಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ…

ಕಾರ್ಕಳ: ಎಸ್ ‌ವಿ ಟಿ  ಕಾಲೇಜಿನಲ್ಲಿ ಇಂಟರ್ಯಾಕ್ಟ್ ಪದಪ್ರದಾನ ಕಾರ್ಯಕ್ರಮ

ಕಾರ್ಕಳ : ಕಾರ್ಕಳದ ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರದಾನ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೊ. ಇಕ್ಬಾಲ್ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25 ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್…