Month: July 2024

ನಿಟ್ಟೆಯಲ್ಲಿ ಉಲಾಯಿ ಪಿದಾಯಿ ಇಸ್ಪೀಟ್ : 9 ಜನ ಉಲಾಯಿ, 11 ಸಾವಿರ ನಗದು ವಶ

ಕಾರ್ಕಳ: ಕಾರ್ಕಳ ತಾಲೂಕು ಕಸಬಾ ಗ್ರಾಮದ ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಬಳಿಯ ಸಾರ್ವಜನಿಕ ಹಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಜಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 9 ಜನ ಆರೋಪಿಗಳು ಸೇರಿದಂತೆ 11,000 ರೂ. ನಗದು ಹಾಗೂ ಆಟಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.…

ಉಡುಪಿ ಜಿಲ್ಲಾಡಳಿತದಿಂದ ನೆರೆ ಪರಿಸ್ಥಿತಿ ಯ ಸಮರ್ಥ ನಿರ್ವಹಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ:ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಉಡುಪಿ ಜಿಲ್ಲಾಡಳಿತವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅವರು ಭಾನುವಾರಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಯ…

ಕಾರ್ಕಳ: ವೃದ್ದೆಯ ಬ್ಯಾಂಕ್ ಖಾತೆಯಿಂದ 3 ಲಕ್ಷ ಹಣ ಎಗರಿಸಿದ ಚಾಲಾಕಿ ಕಳ್ಳರು!

ಕಾರ್ಕಳ: ವಯೋವೃದ್ಧ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಚಾಲಾಕಿ ಕಳ್ಳರು ಬರೋಬ್ಬರಿ 3 ಲಕ್ಷ ದೋಚಿದ ಪ್ರಕರಣ ನಡೆದಿದೆ. ಕಾರ್ಕಳದ ಸಾಜಿದಾ ಬಾನು(72) ಎಂಬವರ ಕೆನರಾ ಹಾಗೂ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣವನ್ನು ವಿತ್ ಡ್ರಾ ಮಾಡಿ ಬರೋಬ್ಬರಿ 3 ಲಕ್ಷ…

ಸಿದ್ದಾಪುರ: ಆ.3 ರಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗಾಸನ ಸ್ಪರ್ಧೆ

ಸಿದ್ದಾಪುರ: ಆಗಸ್ಟ್.3 ಶನಿವಾರ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗಾಸನ ಸ್ಪರ್ಧೆ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಸ್ಪರ್ದಾಳುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಲಯ ಸಿದ್ದಾಪುರ ಜಂಟಿ ಆಶ್ರಯದಲ್ಲಿ ನಡೆಯುವ ಪ್ರಾಂತ…

ಪರಶುರಾಮ ಥೀಮ್ ಪಾರ್ಕ್ ಹಗರಣದ ವಿರುದ್ಧ ಜು‌.23 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಕ್ತಾರ ಶುಭದ ರಾವ್

ಕಾರ್ಕಳ: ಬೈಲೂರು ಸಮೀಪದ ಎರ್ಲಪಾಡಿ ಉಮ್ಮಿಕಲ್ ಬೆಟ್ಟದ ಮೇಲೆ ‌ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಹಾಗೂ ಕಂಚಿನ ಪ್ರತಿಮೆಯ ಹಗರಣದ ವಿರುದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜುಲೈ 23 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ಬಳಿ ಇರುವ ಮಹಾತ್ಮಾ…

ಕಾರ್ಕಳ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಕಾರ್ಕಳ: ತೋಟಗಾರಿಕೆ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024-25ನೇ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಗೇರು, ಕೊಕ್ಕೋ, ಜಾಯಿಕಾಯಿ, ಅನನಾಸು, ಅಂಗಾAಶ ಬಾಳೆ ಹಾಗೂ ಅಪ್ರಧಾನ ಹಣ್ಣುಗಳಾದ ರಾಂಬೂಟಾನ್,…

ಆ.15 ರಿಂದ ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ: ಭಕ್ತಾದಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಚಿಕ್ಕಮಗಳೂರು: ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಇದೇ ಆಗಸ್ಟ್ 15ರಿಂದ ಶ್ರೀ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಿ ಶೃಂಗೇರಿ ಶ್ರೀ ಶಾರದಾ ಪೀಠದ…

ನಾಡ್ಪಾಲು:ಪ್ರವಾಹದ ರಭಸಕ್ಕೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾತನ ಮೃತದೇಹ ಪತ್ತೆ: ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಹಾಗೂ ಹೆಬ್ರಿ ಪೊಲೀಸರ ಕಾರ್ಯಾಚರಣೆ

ಹೆಬ್ರಿ: ಭಾರೀ ಪ್ರವಾಹವಿದ್ದ ಹೊಳೆಯನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಶನಿವಾರ ಮುಂಜಾನೆ ಪತ್ತೆಯಾಗಿದೆ. ಮೂಲತಃ ತುಮಕೂರು ಮೂಲದ ಆನಂದ ಎಂಬವರು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಮನೋರಮಾ ಹೆಗ್ಡೆ…

ಬೈಲೂರು: ಆಶ್ರಮದಲ್ಲಿದ್ದ ವೃದ್ಧ ವಯೋಸಹಜ ಖಾಯಿಲೆಯಿಂದ ಸಾವು

ಕಾರ್ಕಳ: ಕಾರ್ಕಳ ಬೈಲೂರಿನ ಹೊಸ ಬೆಳಕು ಸೇವಾ ಟ್ರಸ್ಟ್ ನಲ್ಲಿ ಆಸರೆ ಪಡೆದಿದ್ದ ಅನಾಥ ವೃದ್ಧರೊಬ್ಬರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ನಾಗಪ್ಪ ನಾಡಪ್ಪ (85ವ) ಮೃತಪಟ್ಟವರು. ಕಳೆದ 2021 ರಲ್ಲಿ ಸಾಬ್ರಕಟ್ಟೆಯ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅವರನ್ನು ಸ್ಥಳೀಯರು ಕಾರ್ಕಳದ ಬೈಲೂರು…

ಕಾರ್ಕಳ ಡಾ. T M A ಪೈ ರೋಟರಿ ಆಸ್ಪತ್ರೆಯಲ್ಲಿ ಜು. 22 ರಿಂದ 27 ರವರೆಗೆ ಸೌಂದರ್ಯವರ್ಧಕ ಚಿಕಿತ್ಸಾ ಶಿಬಿರ:ರಿಯಾಯಿತಿ ದರದಲ್ಲಿ ತಜ್ಞರ ಸಮಾಲೋಚನೆ ಮತ್ತು ಕೆಮಿಕಲ್ ಪೀಲ್

ಕಾರ್ಕಳ: ಸಾಮಾನ್ಯ ಚರ್ಮ ಸಂಬಂಧಿತ ಸಮಸ್ಯೆಗಳಾದ ಮೊಡವೆ, ಮುಖದ ಮೇಲಿನ ನೆರಿಗೆಗಳು, ಸುಕ್ಕುಗಳು, ರೇಖೆಗಳು, ಪಿಗಮೆಂಟೇಷನ್, ಮತ್ತು ಗಾಯದ ಗುರುತುಗಳು ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಕೆಮಿಕಲ್ ಪೀಲ್ ಪ್ರೂಸೀಜರ್ ಬಹಳ ಪರಿಣಾಮಕಾರಿಯಾಗಿದೆ ಎಂದು ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದ ಚರ್ಮ…