Month: November 2024

ಕಾರ್ಕಳದಲ್ಲಿ 69ನೇ ಕನ್ನಡ ರಾಜ್ಯೋತ್ಸವ: ಕನ್ನಡ ವ್ಯಾವಹಾರಿಕ ಭಾಷೆಯಾಗಿ ಬೆಳೆಯಲಿ: ತಹಶಿಲ್ದಾರ್ ಡಾ.ಪ್ರತಿಭಾ ಆರ್

ಕಾರ್ಕಳ: ಕನ್ನಡಿಗರ ಹೆಗ್ಗುರುತು ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಹೊಣೆಯಾಗಿದೆ .ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಬೇಕು, ಕನ್ನಡ ಅಮೃತ ಭಾಷೆಯಾಗಿ ಮನೆ-ಮನಗಳಲ್ಲಿ ರಾರಾಜಿಸಲಿ.ಸ್ಪಷ್ಟ ಕನ್ನಡ, ಸ್ಪುಟ ಕನ್ನಡ ನಮ್ಮ ನಾಲಿಗೆಗಳಲ್ಲಿ ನಲಿದಾಡಲಿ. ಅಖಂಡ ಕರ್ನಾಟಕ ಇನ್ನಷ್ಟು ಬಲಿಷ್ಟಗೊಳ್ಳಲು ಶ್ರಮಿಸೋಣ ಎಂದು…

ಉಳ್ಳಾಲ: ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿಯ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾ ರೆಹಮತ್ ನಗರ ಕಜೆ ಬಾಕಿಮಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಜೋಡಿಯನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಆಂಟಿ ಡ್ರಗ್ ಟೀಂ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಆರೋಪಿತರಿಂದ 2,04,000…

ಕಟೀಲು ನಿವಾಸಿ ತಾರಾನಾಥ ಹತ್ಯೆ ಪ್ರಕರಣ; ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು :ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ತಾಲೂಕು ಕೊಂಡೆಮೂಲ ಗ್ರಾಮದ ಕಟೀಲು ನಿವಾಸಿ ಬಾಬು ಮುಗೇರ ಎಂಬವರ ಮಗ ತಾರಾನಾಥ (39) ಎಂಬವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಟೀಲು ನಿವಾಸಿ ದೇವಕಿ ಎಂದು ಗುರುತಿಸಲಾಗಿದೆ.…

ಅಜೆಕಾರು: ಬೈಕ್-ಕಾರು ಡಿಕ್ಕಿ: ಸವಾರನಿಗೆ ಗಾಯ

ಕಾರ್ಕಳ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮಂಗಳಾನಗರದ ನಿವಾಸಿ ಪ್ರತಾಪ ಶೆಟ್ಟಿ(33) ಎಂಬವರು ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ಅಜೆಕಾರು ಸಮೀಪದ ಹೆರ್ಮುಂಡೆ ಕ್ರಾಸ್ ಬಳಿ ಸಂಭವಿಸಿದೆ. ಪ್ರತಾಪ್ ಶೆಟ್ಟಿಯವರು ಬೈಕಿನಲ್ಲಿ ತಮ್ಮ ಮನೆಯಿಂದ ಅಜೆಕಾರಿಗೆ ಬರುತ್ತಿದ್ದ…

ಮುಂಬಯಿ ಹೊಟೇಲ್ ಉದ್ಯಮಿ ಅಜೆಕಾರು ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ನಿಧನ

ಮುಂಬಯಿ: ಹೊಟೇಲ್ ಉದ್ಯಮಿ, ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಅಜೆಕಾರಿನ ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ಮುಂಬಯಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ತನ್ನ ಕುಟುಂಬ ವರ್ಗದವರ ಜತೆ ಮುಂಬಯಿನ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ತಕ್ಷಣವೇ ಅವರನ್ನು ಆಸ್ಪತೆಗೆ…

ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: 69ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ತೆರಿಗೆ ವಿಕೇಂದ್ರೀಕರಣದ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕಡಿಮೆ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಅನ್ಯಾಯ…

ರೈತರ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆ ವಿವಾದ: ಹಿಂದೂ ಮುಸ್ಲಿಂ ಹೆಸರಿನಲ್ಲಿ ಯತ್ನಾಳ್ ರಾಜಕೀಯ ಮಾಡುತ್ತಿದ್ದಾರೆ:ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಉಡುಪಿ : ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ. ಯಾರಿಗೂ ಅನ್ಯಾಯ ಮಾಡಲ್ಲ. ಎಲ್ಲರನ್ನು ಸಮಾನರಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ ಸಚಿವರು ಹಾಗೂ ಉಡುಪಿ ಜಿಲ್ಲಾ…

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ 

ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ದೀಪಾವಳಿ ಹಬ್ಬದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದರು. ಈ ವೇಳೆ ಪರ್ಯಾಯ…

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಉಡುಪಿ: ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಹತ್ಯೆ ಪ್ರಕರಣ: ಪತಿಗೆ ಚಿಕಿತ್ಸೆಯ ನೆಪದಲ್ಲಿ ಪದೇಪದೇ ಆಸ್ಪತೆ ಬದಲಿಸಿದ ಪಾತಕಿ ಪ್ರತಿಮಾ!: ಆರೋಪಿ ಪ್ರತಿಮಾ ಮತ್ತೆ ಪೊಲೀಸ್ ಕಸ್ಟಡಿ ಸಾಧ್ಯತೆ?

ಕಾರ್ಕಳ: ಅಜೆಕಾರಿನ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ತನಿಖೆ ಇಳಿದಿರುವ ಪೊಲೀಸರಿಗೆ ಬಗೆದಷ್ಟು ಹೊಸಹೊಸ ಅಂಶಗಳು ಬಯಲಾಗುತ್ತಿವೆ. ಪ್ರಿಯಕರನ ಜತೆಗೆ ಸೇರಿ ಪತಿಗೆ ಚಟ್ಟ ಕಟ್ಟಿದ್ದ ಪಾತಕಿ ಪತ್ನಿ ಪ್ರತಿಮಾಳ ಕ್ರಿಮಿನಲ್ ಸಂಚಿನ ವಿಚಾರಗಳೇ ಘನಘೋರ. ಪತಿ ಬಾಲಕೃಷ್ಣ ಪೂಜಾರಿಯ ಸಾವಿನಲ್ಲಿ…