Month: February 2025

ನಾಳೆ (ಫೆ.06) ಕಾರ್ಕಳದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಹಾಗೂ ಆಡಳಿತ ವೈಫಲ್ಯ ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಫೆ.06ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಅಗತ್ಯ ವಸ್ತುಗಳು ಹಾಗೂ ದಿನಬಳಕೆ ಸಾಮಾಗ್ರಿಗಳ ಬೆಲೆ ಹೆಚ್ಚಳ, ಬಡವರ ರೇಷನ್ ಕಾರ್ಡ್ ರದ್ಧತಿ, ಹಾಲಿನ ಬೆಲೆ…

ವಿಟ್ಲ : ರಿವಾಲ್ವರ್ ಮಿಸ್ ಫೈರಿಂಗ್ : ಗಾಯಗೊಂಡ ಕಾಂಗ್ರೆಸ್ ಮುಖಂಡ

ದಕ್ಷಿಣ ಕನ್ನಡ : ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ ಆಕಸ್ಮಿಕವಾಗಿ ಸಿಡಿದು ಗಾಯಗೊಂಡಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಇಂಟಕ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಇತ್ತೀಚೆಗಷ್ಟೇ ತನ್ನ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದು ರಿವಾಲ್ವರ್…

ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರದಿಂದ ದಿಟ್ಟ ಕ್ರಮ: 10 ವರ್ಷಗಳಲ್ಲಿ 25 ಕೋಟಿ ಜನರನ್ನ ಬಡತನದಿಂದ ಮೇಲೆತ್ತಲಾಗಿದೆ : ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ : ದೇಶದಲ್ಲಿ ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರವು ಮಹತ್ವದ ಕ್ರಮಕೈಗೊಂಡಿದ್ದು, ಈಗಾಗಲೇ ನಮ್ಮ 10 ವರ್ಷದ ಆಡಳಿತದಲ್ಲಿ 25 ಕೋಟಿ ಜನಸಂಖ್ಯೆಯನ್ನ ಬಡತನದಿಂದ ಮೇಲೆತ್ತಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು. ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ…

ಬೋಳ: ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

ಕಾರ್ಕಳ: ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೋಳ ಪಿಲಿಯೂರು ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಿತ್ರವೃಂದ(ರಿ.), ಬರಬೈಲು ಇವುಗಳ ಜಂಟಿ ಆಶ್ರಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಶಾಲಾ ವೇದಿಕೆಯಲ್ಲಿ ನಡೆಯಿತು. ಬೋಳ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ…

ನೆಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ: ನಮ್ಮ ಬದುಕಿಗೆ ಸ್ಪಷ್ಟವಾದ ದಾರಿ ತೋರುವುದು ದೇವಾಲಯಗಳು- ಕೊಂಡೆವೂರು ಯೋಗಾನಂದ ಸ್ವಾಮೀಜಿ

ಕಾರ್ಕಳ: ಹೃದಯ ದೇಹಕ್ಕೆ ಹೇಗೆ ಅಗತ್ಯವೋ ಹಾಗೆ ದೇಗುಲವು ಗ್ರಾಮಕ್ಕೆ ಹೃದಯವಿದ್ದಂತೆ,ನಮ್ಮ ಬದುಕಿಗೆ ಸ್ಪಷ್ಟವಾದ ದಾರಿ ತೋರುವುದು ದೇವಾಲಯಗಳು. ದೇವಸ್ಥಾನಗಳು ಸುಭಿಕ್ಷೆಯಾಗಿದ್ದರೆ ಆ ಗ್ರಾಮವು ಸುಭಿಕ್ಷೆಯಾಗಿದೆ ಎಂದರ್ಥ. ಈ ಸ್ಥಳದಲ್ಲಿ ದೇವಿಯ ಸನ್ನಿಧಾನ ಮತ್ತು ಗುರುಗಳ ಸನ್ನಿಧಾನ ಇದೆ. ಜೊತೆಗೆ ತುಳುನಾಡಿನ…

ನಿಟ್ಟೆಯ ಸಹಾಯಕ ಪ್ರಾಧ್ಯಾಪಕ ಅನಂತ ಮೂರ್ತಿ ಅವರಿಗೆ ಡಾಕ್ಟರೇಟ್ ಪದವಿ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಂತ ಮೂರ್ತಿ ಅವರು ‘ಎ ಡಿಸೈನ್ ಅಂಡ್ ಡೆವಲಪ್ಮೆಂಟ್ ಆಫ್ ನೋವೆಲ್ ಮೆಥೋಡಾಲಜಿಸ್ ಟು ರೆಕಗ್ನಿಸ್ ಕ್ಯಾರೆಕ್ಟರ್ ಇನ್ ಯಕ್ಷಗಾನ’ ಎಂಬ ವಿಷಯದ…

ಉಡುಪಿ : ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗಳಿಂದ ಹೆಚ್ಚುವರಿ ಟೋಲ್ ಶುಲ್ಕ ಕಡಿತ : ಬಸ್ ಮಾಲೀಕರಿಂದ ಫೆ.5ರಂದು ಪ್ರತಿಭಟನೆ

ಉಡುಪಿ : ಟೋಲ್ ಪ್ಲಾಜಾಗಳಲ್ಲಿ ತಮ್ಮ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗಳಿಂದ ಹೆಚ್ಚುವರಿ ಟೋಲ್ ಶುಲ್ಕ ಕಡಿತಗೊಳಿಸುವಿಕೆಯನ್ನು ವಿರೋಧಿಸಿ ಬಸ್ ಮಾಲೀಕರು ಫೆಬ್ರವರಿ 5 ರಂದು ಪ್ರತಿಭಟನೆ ನಡೆಸಲಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕೆನರಾ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಸದಾನಂದ ಛತ್ರ,…

ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಈ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಕಠಿಣ ರೂಲ್ಸ್ ಗೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ವೆಬ್ ಕಾಸ್ಟಿಂಗ್ ಹಾಗೂ ಸಿಸಿಟಿವಿ ಮತಷ್ಟು ಕಠಿಣ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು…

ಕಾರ್ಕಳದಲ್ಲಿ ಹಾಡುಹಗಲೇ ವ್ಯಕ್ತಿಗೆ ಚೂರಿ ಇರಿತ: ಗಂಡನ ಮನೆಯವರ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಪ್ರಕರಣ: ತಂಗಿಯ ಸಾವಿಗೆ ಭಾವನಿಗೆ ತಲವಾರಿನಿಂದ ಕಡಿದು ಸೇಡು ತೀರಿಸಿಕೊಂಡ ಅಣ್ಣ

ಕಾರ್ಕಳ: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪತ್ನಿಯ ಅಣ್ಣನೇ ತನ್ನ ಭಾವನಿಗೆ ತಲವಾರಿನಿಂದ ಕಡಿದ ಘಟನೆ ಕಾರ್ಕಳ ಬೈಪಾಸ್ ರಸ್ತೆಯ ಶಿವತಿಕೆರೆಯ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಾರ್ಕಳ ಜೋಡುರಸ್ತೆಯ ನಿವಾಸಿ ಮೊಹಮ್ಮದ್ ರಿಜ್ವಾನ್ ಎಂಬವರ…

ಕಾರ್ಕಳ: ಜ್ಞಾನಭಾರತ್-ಬಾಲಸಂಸ್ಕಾರ ಮಕ್ಕಳಿಂದ ಹಿರಿಯಡ್ಕ ದೇಗುಲ ದರ್ಶನ

ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಹಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಪೂರ್ಣಿಮಾ ಸುರೇಶ್…