
ಕಾರ್ಕಳ, ಏ. 19: ಅಜೆಕಾರು ಶ್ರೀ ಮಹಾವಿಷ್ಣು ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಏ. 18 ರಂದು ಜರುಗಿತು.
ವೇದಮೂರ್ತಿ ಉಡುಪಿ ವಾದಿರಾಜ ತಂತ್ರಿಯವರ ನೇತೃತ್ವದಲ್ಲಿ ಉತ್ಸವ ಬಲಿ, ರಂಗಪೂಜೆ, ಪಲ್ಲಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಷ್ಣುಮೂರ್ತಿ ದೇವರ ಉತ್ಸವ ಮೂರ್ತಿಯ ರಥಾರೋಹಣ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಭರತ್ ಶೆಟ್ಟಿ ಅಜೆಕಾರು, ದೇವಸ್ಯ ಶಿವರಾಮ ಶೆಟ್ಟಿ, ವಿಜಯ ಶೆಟ್ಟಿ,ಭಾಸ್ಕರ ಶೆಟ್ಟಿ, ಸುಜಯ ಶೆಟ್ಟಿ, ಸಮಿತಿ ಸದಸ್ಯರಾದ ಮಜಲುಮನೆ ಪ್ರಕಾಶ್ ಶೆಟ್ಟಿ, ಯಶೋಧಾ ಶೆಟ್ಟಿ, ಪ್ರೀತೇಶ್ ಶೆಟ್ಟಿ,ಸತೀಶ್ ನಾಯಕ್, ಗಣೇಶ್ ನಾಯ್ಕ್, ಅರ್ಚಕರಾದ ರಂಗನಾಥ ಭಟ್, ಕೃಷ್ಣಮೂರ್ತಿ ಭಟ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಜೆ ರಥೋತ್ಸವ ,ಕೆರೆ ದೀಪ, ಉತ್ಸವ ಬಲಿ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆದವು.



.
.
.
.
.
.
.
.
.
.
