
ಕಾರ್ಕಳ,ಏ.20: ಕಾರ್ಕಳ ತಾಲೂಕು ಕಸಬಾ ಗ್ರಾಮದ ಆನಂದ ನಗರ ಸ್ಟಾರ್ ಕೇಬಲ್ ನೆಟ್‌ವರ್ಕ್ ಬಳಿ ಕರಿಯಕಲ್ಲು ಎಂಬಲ್ಲಿ ಮನೆಯೊಂದರ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸ್ಕೂಟರ್ ಬೀಗವನ್ನು ತೆಗೆದುಕೊಂಡು ಮನೆಯ ಹೊರಗಡೆ ನಿಲ್ಲಿಸಿದ್ದ ಸ್ಕೂಟರನ್ನು ಕಳವುಗೈದಿದ್ದಾರೆ.
ಹರೀಶ್ ಶೆಟ್ಟಿ ಎಂಬವರು ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದು ಏ.16ರಂದು ಮನೆಗೆ ಬೀಗ ಹಾಕಿ ಹೋಗಿದ್ದರು. ಏ.19 ರಂದು ಸಂಬAಧಿಕರು ಕರೆ ಮಾಡಿ ಮನೆಯ ಬಾಗಿಲನ್ನು ಒಡೆದಿರುವುದಾಗಿ ತಿಳಿಸಿದ್ದು, ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಕಪಾಟಿನೊಳಗೆ ತಡಕಾಡಿದ್ದು, ಬಳಿಕ ಮನೆಯಲ್ಲಿದ್ದ ಸ್ಕೂಟರ್ ನ ಬೀಗದ ಕೈ ತೆಗೆದುಕೊಂಡು ಸ್ಕೂಟರನ್ನು ಕಳವುಗೈದು ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
