
ಮಣಿಪಾಲ,ಏ.19 :ಕಠಿಣ ಪರಿಶ್ರಮಕ್ಕೆ, ಏಕಾಗ್ರತೆಗೆ, ಸಮರ್ಪಣಾ ಮನೋಭಾವನೆಗೆ, ಹೆತ್ತವರನ್ನು, ಹುಟ್ಟೂರನ್ನು ಗೌರವಿಸುವ ವಿವಿಧ ಉತ್ತಮ ಗುಣಗಳಿಗೆ ಡಾ. ಸುಧಾಕರ್ ಶೆಟ್ಟಿ ಅವರೇ ನಮಗೆ ರೋಲ್ ಮಾಡೆಲ್ ಎಂದು ಅಜೆಕಾರ್ ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಅನಿಲ್ ಕುಮಾರ್ ಜೈನ್ ಹೇಳಿದರು.
ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೊದಲ ಬ್ಯಾಚಿನ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ವ್ಯಕ್ತಿಯ ಬದುಕಿನಲ್ಲಿ ತಂದೆ ತಾಯಿಯ ಆಶೀರ್ವಾದದ ಶಕ್ತಿ ಎಲ್ಲಾ ಶಕ್ತಿಗಳಿಗಿಂತ ಅದ್ಭುತ ಶಕ್ತಿ. ಹೆತ್ತವರ ಪಾದ ಮುಟ್ಟಿ ನಮಸ್ಕರಿಸುವ ಅಭ್ಯಾಸ ಬೆಳೆಸಿಕೊಂಡರೆ ಅದೇ ನಮ್ಮ ಸಾಧನೆಯ ಸ್ಪೂರ್ತಿಯಾಗಿ ಬದಲಾಗುತ್ತದೆ ಎಂದು ಅವರು ಹೇಳಿದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 98ಕ್ಕಿಂತ ಅಧಿಕ ಪಡೆದ ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿಗಳಾದ ಅಶ್ವಿನ್ ವಿ ಶೆಟ್ಟಿ(596), ಪಿ ಅಖಿಲ್ ಶರ್ಮ(594), ಶ್ರೀರಾಮ್ ಕೆ ಹೆಬ್ಬಾರ್(594), ಪರ್ಣಿಕಾ(593), ರಕ್ಷಿತ್ ಶೆಟ್ಟಿ(592) ಈಶ್ವರಿ ಬಿ ಶೇಟ್(591), ಸಾಜನ್ ಆರ್(591), ಪ್ರಥ್ವೀಧರ ಎಲ್ ಕಾರಂತ್(590), ತ್ರಿಶಾ ಶೆಟ್ಟಿ ಬಿ(589), ಚೈತನ್ಯ ಎಸ್ ನಾಯ್ಕ(588), ದೃಶ್ಯ ಜೆ ಶೆಟ್ಟಿ(588), ಕಾರುಣ್ಯ ಸೋಮಯಾಜಿ(588), ಶ್ರೀರಕ್ಷಾ ಹೆಗ್ಡೆ(588) ಇವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಉಪ ಪ್ರಾಂಶುಪಾಲರುಗಳಾದ ಹೇಮಂತ್ ಹಾಗೂ ರವಿ ಜಿ, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.



.
.
.
.
.
.
.
.
.
.
