Month: July 2025

ಸಾಣೂರು: ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ನಿವೃತ್ತ ನರ್ಸ್ ಗೆ 5 ಲಕ್ಷಕ್ಕೂ ಮಿಕ್ಕಿ ವಂಚನೆ: ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ಕಾರ್ಕಳ ತಾಲೂಕು ಸಾಣೂರಿನ ನಿವೃತ್ತ ನರ್ಸ್ ಒಬ್ಬರಿಗೆ ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಎಂದು ನಂಬಿಸಿ 5 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಪ್ರಕರಣ ನಡೆದಿದೆ. ಸಾಣೂರಿನ ಪ್ರೇಮಲತಾ (58) ಎಂಬವರು ನಿವೃತ್ತ ನರ್ಸ್ ಆಗಿದ್ದು,…

ಹೆಬ್ರಿ : ಚುತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಹೆಬ್ರಿ: ಹೆಬ್ರಿ ಕೆಳಪೇಟೆಯಿಂದ ಬಂಟರ ಭವನದವರೆಗೆಗಿನ ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಆರಂಭಿಸುವಂತೆ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರಿಗೆ ಮನವಿ ಸಲ್ಲಿಸಲಾಯಿತು. ಹೆಬ್ರಿ ರಾಷ್ಟ್ರೀಯ ಹೆದ್ದಾರಿ ರಸ್ತೆ 169ಎ ಕಾಮಗಾರಿ ನಡೆಯುತ್ತಿದ್ದು, ಹೆಬ್ರಿಯಿಂದ ಆಗುಂಬೆ ರಸ್ತೆಗೆ ಅರಣ್ಯ…

ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ ಗುರು ಪಾದುಕಾ ದಿಗ್ವಿಜಯ ರಥ ಯಾತ್ರೆಯ ಆರಾಧನೆ

ಕಾರ್ಕಳ: ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆರಾಧನಾ ಮಹೋತ್ಸವದ ಪ್ರಯುಕ್ತ ಗುರು ಪಾದುಕಾ ದಿಗ್ವಿಜಯ ರಥ ಯಾತ್ರೆಯು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪಾರಂಪರಿಕ ಕಟ್ಟಡವಾದ ಯಕ್ಷಗಾನ ಕಲಾ ಮಂದಿರದಲ್ಲಿ ಪೂಜಾ ಕೈಂಕರ್ಯದೊAದಿಗೆ ಆರಾಧನೆಗೊಂಡಿತು. ಭುವನೇಂದ್ರ ಕಾಲೇಜಿನ ಆರಂಭದ ದಿನಗಳಲ್ಲಿ…

ಮಿಯ್ಯಾರು: ಮಧುಮೇಹದಿಂದ ಬಳಲುತ್ತಿದ್ದ ಮಹಿಳೆ ಸಾವು

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಮಧುಮೇಹ ಹಾಗೂ ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಿಯ್ಯಾರಿನ ಮಲ್ಲಿಕಾ ಲೋಬೊ (43) ಮೃತಪಟ್ಟವರು. ಜೂ.30 ರಂದು ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದ ಅವರು ಸಂಜೆಯ ವೇಳೆಗೆ ಅವರ ಮಗಳು ಎಬ್ಬಿಸಿದಾಗ ಮಾತನಾಡದೇ ಇದ್ದ ಕಾರಣ ಅವರನ್ನು…

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ RSS ಬ್ಯಾನ್ ಮಾಡುತ್ತೇವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ತಿರುಕನ ಕನಸು: ಎಕ್ಸ್ ನಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಕಿಡಿ

ಬೆಂಗಳೂರು:ಮೀಸೆ ತಿರುವಿ ಮೆರೆದೋರೆಲ್ಲ ಮಣ್ಣಾದರು, ಪ್ರಿಯಾಂಕ ಖರ್ಗೆಯವರೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಿಮ್ಮ “ತಿರುಕನ ಕನಸಿ” ನ ಬಗ್ಗೆ ಖಂಡಿತ ಆಕ್ಷೇಪವಿಲ್ಲ. ಆದರೆ ಅಧಿಕಾರಕ್ಕೆ ಬಂದರೆ RSS ನಿಷೇಧ ಮಾಡುತ್ತೇವೆ ಎಂಬ ನಿಮ್ಮ ದರ್ಪದ ಮಾತಿನ ಬಗ್ಗೆ ಕನಿಕರ ಪಡುತ್ತೇವೆ…

ಬ್ರಹ್ಮಾವರ: ಹಸು ರುಂಡ ಪತ್ತೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಹಸುವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದು,ತಲೆಮೆರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್‌ ಬಂಧಿತರು. ಕುಂಜಾಲು…

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ : ಇಂದಿನಿಂದಲೇ ಜಾರಿಗೆ ಬರಲಿದೆ ಪರಿಷ್ಕೃತ ದರ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ. ಇಳಿಕೆಯಾಗಿದ್ದು, 14 ಕೆಜಿ LPG ಸಿಲಿಂಡರ್‌ನ ಬೆಲೆಯಲ್ಲಿ…