Month: August 2025

ರಾಜ್ಯ ಸರ್ಕಾರದಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಕಡೆಗಣನೆ : ಸಾಣೂರು ನರಸಿಂಹ ಕಾಮತ್ ಆಕ್ರೋಶ

ಕಾರ್ಕಳ, ಆ,28: ಕ್ಷೇತ್ರ ಪುನರ್ ವಿಂಗಡಣೆ ಮೀಸಲಾತಿ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡಿಕೊಂಡು ಬರುತ್ತಿರುವ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ 5 ವರ್ಷಗಳು ಕಳೆದಿದೆ. ಆದರೂ ಸರಕಾರವು ಮೀಸಲಾತಿ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಇದೇ ಪರಿಸ್ಥಿತಿ…

ಒಂಟಿ ಜೀವನದಿಂದ ದಾಂಪತ್ಯ ಬದುಕಿಗೆ ಕಾಲಿಟ್ಟ ಖ್ಯಾತ ನಿರೂಪಕಿ ಅನುಶ್ರೀ: ರೋಶನ್ ಜತೆ ಹಸೆಮಣೆ ಏರಿದ ಕರಾವಳಿ ಹುಡುಗಿ

ಬೆಂಗಳೂರು, ಆ 28 : ಮಂಗಳೂರಿನ ಹುಡುಗಿ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ಒಂಟಿ ಜೀವನಕ್ಕೆ ಗುಡ್‌ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿ ಪುತ್ರ ರೋಶನ್ ಅವರೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ…

ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣ: ಫಂಡಿಂಗ್ ಕುರಿತು ಆರೋಪಿ ಶಾರಿಕ್​ನ ತೀವ್ರ ವಿಚಾರಣೆ

ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಭಯೋತ್ಪಾದಕರಿಗೆ ಫಂಡಿಂಗ್ ಮಾಡಿದ್ದು ಯಾರು‌‌ ಎಂಬುದರ ಬಗ್ಗೆ (ಇಡಿ) ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಳಿಸಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವವರ ಹಣದ ಮೂಲದ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಕುಕ್ಕರ್ ಬ್ಲಾಸ್ಟ್​ ಪ್ರಕರಣದ ಪ್ರಮುಖ ಆರೋಪಿ…

ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ(ಆ.28) ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ, ಆ,27: ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಆ.28 ಗುರುವಾರ) ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ,ಪ್ರೌಢ, ಪದವಿಪೂರ್ವ ಹಾಗೂ ITI ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಸ್ಬರೂಪ.ಟಿ.ಕೆ ಆದೇಶಿಸಿದ್ದಾರೆ.

ಪೂನಾದಲ್ಲಿ ಎಣ್ಣೆಹೊಳೆಯ ಹೊಟೇಲ್ ಉದ್ಯಮಿಯ ಭೀಕರ ಮರ್ಡರ್: ಹೊಟೇಲ್ ಸಿಬ್ಬಂದಿಯಿಂದಲೇ ಹತ್ಯೆಗೀಡಾದ ಸಂತೋಷ್ ಶೆಟ್ಟಿ

ಪೂನಾ,ಆ.27: ಹೊಟೇಲ್ ಸಿಬ್ಬಂದಿಯೊಬ್ಬ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದಕ್ಕೆ ಗದರಿದ ಹೊಟೇಲ್ ಮಾಲೀಕನನ್ನೇ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ(46)…

ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ಒಳಚರಂಡಿ ಅವ್ಯವಸ್ಥೆ ಕುರಿತು ಪುರಸಭೆ ಆಡಳಿತದ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರ ಆಕ್ರೋಶ

ಕಾರ್ಕಳ, ಆ. 26: ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.13 ಕೋ.ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಮುಗಿದರೂ ಜನರಿಗೆ ಕೊಳಚೆ ನೀರಿನಿಂದ ಮುಕ್ತಿ ಸಿಕ್ಕಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಸದಸ್ಯ ಅಶ್ಪಕ್ ಅಹಮದ್ ಕಾರ್ಕಳ…

ಕಾರ್ಕಳ: ಬಡ್ಡಿ ವ್ಯಾಪಾರಿ ನವೀನ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದಲೇ ಕೃತ್ಯ: ಮಹಿಳೆಯ ವಿಚಾರದಲ್ಲಿ ನಡೆಯಿತೇ ಹತ್ಯೆ?

ಕಾರ್ಕಳ, ಆ.26: ಕಾರ್ಕಳದ ಕುಂಟಲ್ಪಾಡಿ ಬಳಿ ಸೋಮವಾರ ತಡರಾತ್ರಿ ಬಡ್ಡಿ ವ್ಯಾಪಾರಿ ನವೀನ್ ಪೂಜಾರಿ ಎಂಬವರನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣ ಆರೋಪಿ ಬೆಳ್ತಂಗಡಿ ತಾಲೂಕಿನ ನಡಾ ಗ್ರಾಮದ ಪರೀಕ್ಷಿತ್ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.…

ಬೆಳ್ಮಣ್ ಬಂಟರ ಸಂಘದ ಪದಗ್ರಹಣ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ: ಬಂಟರ ಯಾನೆ ನಾಡವರ ಸಂಘ (ರಿ.) ಬೆಳ್ಮಣ್ ವಲಯ ಇದರ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ವಾರ್ಷಿಕ ಸಮಾವೇಶ ಆಗಸ್ಟ್ 24ರಂದು ಬೆಳ್ಮಣ್ ನ ಹೋಟೆಲ್ ಸೂರಜ್ ಇನ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು…

ಧರ್ಮಸ್ಥಳ ಕೇಸ್ ಗೆ ಮಹತ್ವದ ತಿರುವು: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆ!

ಬೆಳ್ತಂಗಡಿ, ಆ.26 : ಧರ್ಮಸ್ಥಳದಲ್ಲಿ ಅಸ್ಥಿಪಂಜರ ಶೋಧ ಪ್ರಕರಣಕ್ಕೆ ಕುರಿತಂತೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಮಂಗಳವಾರ ‌ಬೆಳಗ್ಗೆ ಆರೋಪಿ ಚೆನ್ನಯ್ಯನನ್ನು ಕರೆದೊಯ್ದು ಶೋಧ ಕಾರ್ಯ ನಡೆಸಿದ್ದಾರೆ.ಈ ವೇಳೆ ತಿಮರೋಡಿ ಮನೆಯಲ್ಲಿ ಚೆನ್ನಯ್ಯನ ಮೊಬೈಲ್…

ಕಾರ್ಕಳದ ಕುಂಟಲ್ಪಾಡಿಯಲ್ಲಿ  ವ್ಯಕ್ತಿಯ ಭೀಕರ ಹತ್ಯೆ: ಮಂಗಳೂರು ಮೂಲದ ಬಡ್ಡಿ ವ್ಯಾಪಾರಿ ನವೀನ್ ಪೂಜಾರಿ ಚೂರಿಯಿಂದ ಇರಿದು ಕೊಲೆ

ಕಾರ್ಕಳ, ಆ26: ಮಂಗಳೂರು ಮೂಲದ ಬಡ್ಡಿ ವ್ಯಾಪಾರಿಯೊಬ್ಬನನ್ನು ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಮೃತ ವ್ಯಕ್ತಿಯ ಮಂಗಳೂರಿನ ಪಡೀಲ್ ನಿವಾಸಿ ನವೀನ್ ಪೂಜಾರಿ(50) ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಕಾರ್ಕಳ ಪರಿಸರದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ನವೀನ್…