Month: October 2025

ದಸರಾ ರಜೆ 10 ದಿನ ವಿಸ್ತರಣೆ: ಅ.18ರವರೆಗೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಸಮೀಕ್ಷೆ ಹೊರೆ

ಬೆಂಗಳೂರು, ಅ.07: ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18 ರವರೆಗೆ ದಸರಾ ರಜೆಯನ್ನು ವಿಸ್ತರಿಸಿದೆ. ಈ ಬಗ್ಗೆ ಸಿಎಂ…

ಕಾರ್ಕಳದಲ್ಲಿ ಸವಿತಾ ಸಮಾಜ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕಚೇರಿ ಉದ್ಘಾಟನೆ: ಶಾಂತಿ, ಶ್ರದ್ದೆಗೆ ಪ್ರಾಮಾಣಿಕತೆಗೆ ಹೆಸರಾದ ಸವಿತಾ ಸಮಾಜದ ಸಹಕಾರಿ ಸಂಘದ ಶಾಖೆಗಳು ರಾಜ್ಯಕ್ಕೆ ವ್ಯಾಪಿಸಲಿ: ಪುರಸಭಾಧ್ಯಕ್ಷ ಯೋಗೀಶ್ ದೇವಾಡಿಗ

ಕಾರ್ಕಳ, ಅ 07: ಸಮಾಜದ ಎಲ್ಲಾ ಸಮುದಾಯಗಳ ಜೊತೆ ಅತ್ಯಂತ ಅನ್ಯೋನ್ಯತೆಯಿಂದ ಗುರುತಿಸಿಕೊಂಡ ಸಮಾಜ ಇದ್ದರೆ ಅದು ಸವಿತಾ ಸಮಾಜ. ಪ್ರಮಾಣಿಕ ದುಡಿಮೆಯಿಂದ ಸಮಾನ ಮನಸ್ಕ ಸವಿತಾ ಸಮಾಜದ ಬಂಧುಗಳು ಒಗ್ಗೂಡಿ ಕಟ್ಟಿದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು…

ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾದ ಗ್ರೀಷ್ಮಾ ಎಸ್ ರಾಷ್ಟçಮಟ್ಟಕ್ಕೆ ಆಯ್ಕೆ

ಕಾರ್ಕಳ.ಅ,07 :ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಗ್ರಾಮಾಂತರ ಹಾಗೂ ಸಂತ ಕ್ಲಾರೆಟ್ ಪದವಿಪೂರ್ವ ಕಾಲೇಜು ಜಾಲಹಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲಿ ್ಲ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ ಕಾರ್ಕಳ…

ಗೋಪಾಲ ಭಂಡಾರಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಆಯ್ಕೆ

ಹೆಬ್ರಿ: ಕಾರ್ಕಳ ಮಾಜಿ ಶಾಸಕ, ಕಾಂಗ್ರೆಸ್ ನಾಯಕರಾಗಿದ್ದ ದಿ. ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಹೆಬ್ರಿಯ ಚೈತನ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯದರ್ಶಿಯಾಗಿ ದೀಪಾ ಭಂಡಾರಿ ಚಾರ, ಕೋಶಾಧಿಕಾರಿಯಾಗಿ…

SSLC ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಸರ್ಕಾರ: ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ಆದೇಶ

ಬೆಂಗಳೂರು, 07: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದ್ದು, ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು 5% ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ಪ್ರಥಮ ಬಾರಿಗೆ ಹಾಜರಾಗುವ…

ಬಿಹಾರ ಚುನಾವಣೆಗೆ ಮುಹೂರ್ತ ಫಿಕ್ಸ್: 2 ಹಂತದಲ್ಲಿ ಮತದಾನ; ನ.14ಕ್ಕೆ ಫಲಿತಾಂಶ ಪ್ರಕಟ

ನವದೆಹಲಿ : ಬಿಹಾರ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ಮತ್ತು 2ನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.243 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ…

ನಾಳೆ(ಅ.7) ಸವಿತಾ ಸಮಾಜ ವಿವಿಧೋದ್ದೇಶ ಸಂಘದ ಕಾರ್ಕಳ ಶಾಖೆಯ ಸ್ವಂತ ನೂತನ ಕಚೇರಿ ಉದ್ಘಾಟನೆ

ಕಾರ್ಕಳ, ಅ.06: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಕಾರ್ಕಳ ಶಾಖೆಯ ನೂತನ ಸ್ವಂತ ಕಚೇರಿಯು ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿಯ ಪ್ರೈಮ್ ಸಿಟಿ ಸೆಂಟರ್ ನಲ್ಲಿ ನಾಳೆ (ಅ.7) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ ಎಂದು…

ಹೆಬ್ರಿ : ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಾರದಾ ಪೂಜೆ

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಶಾರದಾ ಪೂಜೆ ನೆರವೇರಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬಚ್ಚಪ್ಪು ಹಾಗೂ ಬನಶಂಕರಿ ಭಜನಾ ಮಂಡಳಿ ಮುಳ್ಳುಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ…

ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಕಾರ್ಕಳ ಮಂಡಲದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ: ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ದೇರಳಕಟ್ಟೆಯ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದಲ್ಲಿ, ಬಜಗೋಳಿಯ ತುಡಾರ್ ಕಾಂಪ್ಲೆಕ್ಸ್ ನ ಶ್ರೀ ಸಾಯಿ ಸಭಾಭವನದಲ್ಲಿ ಜರುಗಿತು. ಶಾಸಕ ವಿ.…

ಚೇತನಾ ವಿಶೇಷ ಶಾಲೆಯಲ್ಲಿ ಮಕ್ಕಳು ತಯಾರಿಸಿದ ಹಣತೆಗಳು ಮಾರಾಟಕ್ಕೆ ಬಿಡುಗಡೆ

ಕಾರ್ಕಳ: ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಮಣ್ಣಿನ ಹಣತೆಗಳನ್ನು ಸಿದ್ಧಗೊಳಿಸಿದ್ದು, ಶಾರದ ಪೂಜೆಯ ದಿನ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ ಕಮಲಾಕ್ಷ ಕಾಮತ್ ದೀಪ ಬೆಳಗಿಸಿ ಮಾರಾಟಕ್ಕೆ…