ಕಾರ್ಕಳ : ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಪಳ್ಳಿ ಗ್ರಾಮದ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸುಂದರ (40ವ) ಎಂಬವರು ಭಾನುವಾರ ಸಂಜೆ ಕಚೇರಿಗೆ ಬೇಕಾದ ಪರಿಕರಗಳನ್ನು ತರಲು ತೆರಳಿದ್ದರು. ಸಾರ್ವಜನಿಕರು ಗ್ರಾಮ ಕರಣಿಕ ಅಭಿಷೇಕ್ ಕುಮಾರ್ ಅವರಿಗೆ ಕರೆ ಮಾಡಿ ಸುಂದರ ಅವರು ಪಳ್ಳಿ ಶಾಲೆಯ ಬಳಿ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದರು. ಅಭಿಷೇಕ್ ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಸುಂದರ ಅವರು ಎದೆ ಹಿಡಿದುಕೊಂಡು ಕುಸಿದಿದ್ದರು. ಕೂಡಲೇ ಅವರನ್ನು ಆಂಬ್ಯುಲೆನ್‌ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಸುಂದರ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.