ಹೈದರಾಬಾದ್ : ಹೈದರಾಬಾದ್ ನಗರದ ಕುಶೈಗುಡ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಸತೀಶ್, ಅವರ ಪತ್ನಿ ವೇದಾ ಮತ್ತು ಅವರ ಇಬ್ಬರು ಮಕ್ಕಳಾದ 5 ವರ್ಷದ ನಿಹಾಲ್ ಮತ್ತು 9 ವರ್ಷದ ನಿಶಿಕೇತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮಕ್ಕಳು ಮಾನಸಿಕವಾಗಿ ಅಸ್ವಸ್ಥರು ಎನ್ನುವ ಕಾರಣಕ್ಕೆ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಮೃತರ ಶವಗಳನ್ನು ಹೈದರಾಬಾದ್ ನಗರದ ಕುಶೈಗುಡಾ ಪ್ರದೇಶದ ಅವರ ಅಪಾರ್ಟ್ಮೆಂಟ್ನಿAದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಘಟನೆ ಶುಕ್ರವಾರ ನಡೆದಿರುವ ಶಂಕೆ ಇದ್ದು, ಶನಿವಾರ ಬೆಳಕಿಗೆ ಬಂದಿದೆ. ಕಂದಿಗುಡ ಪ್ರದೇಶದಲ್ಲಿ ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸತೀಶ್ ವೇದಾ ದಂಪತಿಯ ಇಬ್ಬರು ಮಕ್ಕಳೂ ಖಾಯಿಲೆಯಿಂದ ಬಳಲುತ್ತಿದ್ದು,ಚಿಕಿತ್ಸೆ ನೀಡಿದರೂ ಮಕ್ಕಳು ಗುಣಮುಖರಾಗಿರಲಿಲ್ಲ. ಇದರಿಂದಾಗಿ ಪೋಷಕರು ಖಿನ್ನತೆಗೆ ಜಾರಿದ್ದ ಪೋಷಕರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.