ಶಿವಮೊಗ್ಗ: ಮೇ 10ರಂದು ವಿಧಾನಸಭಾ ಚುನಾವಣೆ ಹಿನ್ನಲೆ ಕಡ್ಡಾಯ ಮತದಾನ ಮಾಡುವ ನಿಟ್ಟಿನಲ್ಲಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ .
ಬೇಸಿಗೆಯ ಬಿರು ಬೀಸಿಲಿನಿಂದ ತತ್ತರಿಸಿದ ಜನರು ಜೋಗ ಜಲಪಾತವನ್ನು ನೋಡುವ ಮೂಲಕ ಕಣ್ತುಂಬಿಕೊಳ್ಳಲು ಹೋಗುವುದು ಸಹಜ. ಅದರಲ್ಲೂ ಇದೀಗ ಬೇಸಿಗೆಯಲ್ಲಿ ರಜೆ ದಿನವನ್ನು ಕಾಯುವವರೇ ಹೆಚ್ಚು. ಮುಂದಿನ ಮೇ 10ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಬಹತೇಕ ಕಚೇರಿಗಳಿಗೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಈ ನಿಟ್ಟಿನಲ್ಲಿ ರಜೆಘೋಷಣೆ ಮಾಡಿರುವುದರಿಂದ ಮತದಾನ ಮಾಡದೇ ಪ್ರವಾಸಿ ತಾಣಗಳಿಗೆ ಹೋಗುವವರು ಇರುತ್ತಾರೆ . ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ ಜೋಗ ಜಲಪಾತ ವೀಕ್ಷಣೆಯನ್ನು ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಬ್ಯಾನರ್ ಹಾಕುವ ಮೂಲಕ ಕಡ್ಡಾಯ ಮತದಾನ ಮಾಡುವ ಕಾರಣಕ್ಕಾಗಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಎಂಬ ಎಚ್ಚರಿಕೆ ಸಂದೇಶವನ್ನು ಪ್ರಕಟನೆ ಮೂಲಕ ತಿಳಿಸಲಾಗಿದೆ.

