Share this news

ನಿಟ್ಟೆ: ಉಡುಪಿಯ ಎಂ.ಜಿ. ಕ್ರೀಡಾಂಗಣದಲ್ಲಿ ಸೆ.15 ರಂದು ನಡೆದ ದಸರಾ ಜಿಲ್ಲಾ ಕ್ರೀಡಾಕೂಟದಲ್ಲಿ ನಿಟ್ಟೆ ಡಾ.ಎನ್‌ಎಸ್‌ಎಎಂ ಕಾಲೇಜಿನ ಕ್ರೀಡಾಪಟುಗಳು 14 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಾ. ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಪ್ರತೀಕ್ಷಾ – 800 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ 4್ಠ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ.ಪದವಿಪೂರ್ವ ಕಾಲೇಜಿನ ಕುಮಾರಿ. ನಂದಿನಿ ಜಿ ಅವರು 1,500 ಮೀಟರ್ ಮತ್ತು 3,000 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 4್ಠ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದರು. ಪದವಿಪೂರ್ವ ಕಾಲೇಜಿನ ಕುಮಾರಿ. ಸಾಕ್ಷಿ – 1,500 ಮೀಟರ್, 3,000 ಮೀಟರ್ ಓಟದಲ್ಲಿ ಹಾಗೂ 4್ಠ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.ಹೈಸ್ಕೂಲ್ ನ ಕುಮಾರಿ. ರಶ್ಮಿತಾ – 100 ಮೀಟರ್ ಮತ್ತು 200 ಮೀಟರ್ ಮತ್ತು 4್ಠ100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವರು.

ಇಂಗ್ಲೀಷ್ ಮೀಡಿಯಂ ಶಾಲೆಯ ಕುಮಾರಿ. ಸುಜೀಕ್ಷಾ – 4್ಠ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಪಿ.ಯು ಕಾಲೇಜಿನ ಕುಮಾರಿ ಜೀವಿತಾ 4್ಠ100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರಥಮ ದರ್ಜೆ ಕಾಲೇಜಿನ ತುಷಾರ್ ಶೆಟ್ಟಿ – ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದರು. ಪ್ರಥಮ ದರ್ಜೆ ಕಾಲೇಜಿನ ಬಸವರಾಜ್ 100 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಮತ್ತು 4್ಠ100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದರು. ಪಿ.ಯು ಕಾಲೇಜಿನ ಕುಲದೀಪ್ ಕುಮಾರ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಮತ್ತು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕವನ್ನು ಪಡೆದರು. ಪಿ.ಯು ಕಾಲೇಜಿನ ತರುಣ್ ಜೈನ್ 4್ಠ400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದರು. ಪಿ.ಯು ಕಾಲೇಜಿನ ಸಮಿತ್ 4್ಠ100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವರು. ಪಿ.ಯು ಕಾಲೇಜಿನ ಆದಿತ್ಯ 4್ಠ400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗಳಿಸಿರುವರು. ಪಿ.ಯು ಕಾಲೇಜಿನ ನವೀನ್ 4್ಠ400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿರುವರು. ಪಿ.ಯು ಕಾಲೇಜಿನ ಗುರುರಾಜ್ 4್ಠ 400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

   

 

Leave a Reply

Your email address will not be published. Required fields are marked *