

ಕಾರ್ಕಳ, ಸೆ.18: ರೈಸ್ ಮಿಲ್ ಗಳಲ್ಲಿ ರೈತರು ಮಾರಾಟ ಮಾಡುವ ಭತ್ತದಲ್ಲಿ ತೂಕ ಹಾಗೂ ಗುಣಮಟ್ಟದಲ್ಲಿ ಭಾರೀ ಮೋಸವಾಗುತ್ತಿದೆ ಎಂದು ಕಾರ್ಕಳ ತಾಲೂಕು ಕೃಷಿ ಕಿಸಾನ್ ರಕ್ಷಣಾ ಸಮಿತಿ ಆರೋಪಿಸಿದೆ.
ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಸೆ 12ರಂದು ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಂಘದ ಅಧ್ಯಕ್ಷ ಸುಕೀರ್ತಿ ಜೈನ್ ರೆಂಜಾಳ ಇವರು ನೀಡಿದ ದೂರಿನ ಹಿನ್ನಲೆಯಲ್ಲಿ ಈ ಕುರಿತು ಸೆ.19 ರಂದು ಶನಿವಾರ ಮಧ್ಯಾಹ್ನ 12.30ಕ್ಕೆ ಶಾಸಕ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ರೈಸ್ ಮಿಲ್ ಮಾಲೀಕರ ಸಭೆಯನ್ನು ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
