ನವದಹಲಿ: ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅತಿಹೆಚ್ಚು ಮತಗಳಿಂದ ಅಂಗೀಕಾರವಾಯಿತು.
ಸೋಮವಾರದಿಂದ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಈ ಮಸೂದೆ ಮಂಡನೆಯಾಗಿತ್ತು. ಸುದೀರ್ಘ 8 ಗಂಟೆಗಳ ಚರ್ಚೆಯ ಬಳಿಕ, ಬುಧವಾರ ಲೋಕಸಭೆಯಲ್ಲಿ ಇಬ್ಬರು ಸಂಸದರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಂಸದರು ವಿಧೇಯಕದ ಪರವಾಗಿ ಮತ ಚಲಾಯಿಸಿದರು. ಈ ಮೂಲಕ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹೆಚ್ಚು ಮತಗಳು ಬೀಳುವ ಮೂಲಕ ಅಂಗೀಕಾರಗೊಂಡಿದೆ.
ಹೊಸ ಸಂಸತ್ ಭವನದಲ್ಲಿ ಮೊದಲ ಮಸೂದೆ ಮಹಿಳಾ ಮೀಸಲಾತಿಗೆ ಸಂಬಂಧಿಸಿದ್ದು, ಇದಕ್ಕೆ ‘ನಾರಿ ಶಕ್ತಿ ವಂದನಾ ಕಾಯ್ದೆ’ ಎಂದು ಹೆಸರಿಡಲಾಗಿತ್ತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದು ಈ ಪೈಕಿ ಪರಿಶಿಷ್ಟ ಜಾತಿಗೆ ಹಾಗೂ ಪರಿಶಿಷ್ಟ ಪಂಗಡಗಳಿಗೂ ಪ್ರತ್ಯೇಕವಾಗಿ ಮೀಸಲಿಡಲಾಗಿದೆ.ಇದೇ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಮಹಿಳಾ ಮೀಸಲಾತಿಯನ್ನು ಕಲ್ಪಿಸುವುದು ಈ ವಿಧೇಯಕರ ಮುಖ್ಯ ಉದ್ದೇಶವಾಗಿದೆ.
ಇಂತಹ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಿನ್ನೆಯಿಂದ ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆಯನ್ನು ನಡೆಸಲಾಯಿತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಇದು ನಮ್ಮದು, ಇದು ನಮ್ಮದು ಅಂತ ಹೇಳಿದ್ದರು. ಆ ಬಳಿಕ ಪರ ವಿರೋಧದ ಚರ್ಚೆಯಾದ ನಂತರ, ನೂತನ ಸಂಸತ್ ಭವನದಲ್ಲಿನ ಮೊದಲ ಬಿಲ್ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಮತಕ್ಕೆ ಹಾಕಿ ಅಂಗೀಕಾರ ಪಡೆದರು
ಈ ಮೂಲಕ ಮಹಿಳಾ ಮೀಸಲಾತಿ ವಿಧೇಯಕವು ನೂತನ ಸಂಸತ್ತಿನಲ್ಲಿ ಅಂತಿಮವಾಗಿ ಕಾಯ್ದೆ ರೂಪ ಪಡೆಯುವ ಮೂಲಕ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ.