Share this news

ನವದೆಹಲಿ : ಮಹಿಳಾ ಮೀಸಲಾತಿ ಮಸೂದೆಗೆ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದು, ರಾಷ್ಟçಪತಿಗಳ ಒಪ್ಪಿಗೆ ನಂತರ ನಾರಿ ಶಕ್ತಿ ವಂದನ್ ಅಧಿನಿಯಮ್ ಭಾರತದಲ್ಲಿ ಕಾನೂನು ಎನಿಸಿಕೊಂಡಿದೆ. ಈಗ ಕಾಯಿದೆಯಾಗುತ್ತಿದ್ದಂತೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿತ್ತು. ಇದು ಸೆಪ್ಟೆಂಬರ್ 19 ರಂದು ಹೊಸ ಸಂಸತ್ತಿನ ಕಟ್ಟಡಕ್ಕೆ ತನ್ನ ಕಾರ್ಯಾಚರಣೆಯನ್ನು ಬದಲಾವಣೆ ಮಾಡಿದ ಬಳಿಕ ಭಾರತೀಯ ಸಂಸತ್ತಿನ ಐತಿಹಾಸಿಕ ಸಾಧನೆ ಎನಿಸಿಕೊಂಡಿದೆ. ಎಐಎಂಐಎA ಮಾತ್ರ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದು, ಮುಸ್ಲಿಂ ಮಹಿಳಾ ಪ್ರತಿನಿಧಿಗಳಿಗೆ ಮೀಸಲಾತಿ ಇಲ್ಲದಿರುವುದರಿಂದ ಇದು ಮೇಲ್ಜಾತಿಯ ಮಹಿಳೆಯರಿಗೆ ಮಾತ್ರವೇ ಲಾಭವಾಗಲಿದೆ ಎಂದು ಹೇಳಿದೆ. ಕಾಂಗ್ರೆಸ್ ಕೂಡ ಒಬಿಸಿ ಮೀಸಲಾತಿಯನ್ನು ಆಗ್ರಹಿಸಿತ್ತು. ಸಂಸತ್ತಿನಲ್ಲಿ ಅಂಗೀಕಾರದ ನಂತರ, ರಾಷ್ಟ್ರಪತಿಗಳ ಸಹಿ ಹಾಕಿ ಕಾನೂನಾದರೂ, ಇದು ಜಾರಿಗೆ ಬರಲು ದೀರ್ಘಾವಧಿ ತಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಲೋಕಸಭೆಯಲ್ಲಿ ವಿದೇಯಕಕ್ಕೆ 415 ಮತಗಳು ಸಿಕ್ಕಿದ್ದರೆ, 2 ಮತಗಳನ್ನು ವಿರುದ್ಧವಾಗಿ ಹಾಕಲಾಗಿತ್ತು. ಎಐಎಂಐಎAನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇಫ್ತಿಕಾರ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು. ಆದರೆ, ರಾಜ್ಯಸಭೆಯಲ್ಲಿ ಈ ವಿಧೇಯಕಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿತ್ತು.

 

 

 

 

Leave a Reply

Your email address will not be published. Required fields are marked *