ಹೆಬ್ರಿ: ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಕುಮಾರ್ ಎಂಬವರಿಗೆ ಅಬ್ದುಲ್ ರೆಹಮಾನ್ ಎಂಬಾತ ಕುವೈತ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2-4 ವರ್ಷಗಳ ಹಿಂದೆ ಗೂಗಲ್ ಪೇ ಮೂಲಕ ಶಿವಕುಮಾರ ಅವರಿಂದ 88,000 ರೂ. ಹಣ ಪಡೆದು ಉದ್ಯೋಗ ಕೊಡಿಸದೆ ಪಡೆದುಕೊಂಡ ಹಣವನ್ನು ವಾಪಾಸು ಕೊಡದೇ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






