Share this news
ಮುಂಬಯಿ:ಗರ್ಭಕAಠ ಕ್ಯಾನ್ಸರ್ ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ವಿಶ್ವದಾದ್ಯಂತ ಹರಡಿದ್ದು ಲಕ್ಷಾಂತರ ಅಭಿಮಾನಿಗಳು ಪೂನಂ ಪಾಂಡೆ ಸಾವಿನ ಸುದ್ದಿ ಕೇಳಿ ದಿಗ್ಭಾçಂತರಾಗಿದ್ದರು. ಆದರೆ ಇದೀಗ ಪೂನಂ ಪಾಂಡೆ ಸತ್ತಿಲ್ಲ ಜೀವಂತವಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಈ ಕುರಿತು ಪೂನಂ ಪಾಂಡೆಯೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದ್ದು,ನಾನು ಸತ್ತಿಲ್ಲ ಬದುಕಿದ್ದೇನೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹೀಗೆ ಮಾಡಿದೆ ಎಂದು ನಟಿ ಪೂನಂ ಪಾಂಡೇ ಹೇಳಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ನಟಿ ಪೂನಂ ಪಾಂಡೆ ಪ್ರಚಾರ ಪಡೆಯಲು ಯತ್ನಿಸಿದ್ದಾರೆ ಎನ್ನಲಾಗಿದ್ದು ಆಕೆಯ ಅಭಿಮಾನಿಗಳು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಇಡೀ ದಿನ ನಟಿ ಪೂನಂ ಪಾಂಡೇ ಸತ್ತು ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹೀಗೆ ಮಾಡಿದೆ, ನಾನು ಸತ್ತು ಹೋಗಿಲ್ಲ ಬದುಕಿದ್ದೇನೆ ಎಂದು ನಟಿ ಪೂನಂ ಪಾಂಡೇ ಹೇಳಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎನ್ನುವುದು ಸಹಜವಾಗಿಯೇ ಸುದ್ದಿಯಾಗಿತ್ತು. ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಆದರೆ, ಅದು ಉದ್ದೇಶಪೂರ್ವಕ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ನಾನೇ ನನ್ನ ಸೋಷಿಯಲ್ ಮೀಡಿಯಾ ಮೂಲಕ ಹೀಗೆ ಪೋಸ್ಟಾ ಮಾಡಿದ್ದೇನೆ ಎಂದು ನಟಿ ಪೂನಂ ಪಾಂಡೆ ಹೇಳಿದ್ದಾರೆ.
ಆದರೆ, ನಿನ್ನೆ ಆಕೆಯ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ನ್ಯೂಸ್ ನೋಡಿದಾಗಲೇ ಮೀಡಿಯಾಗಳಿಗೆ ಸಂಶಯ ಬಂದಿತ್ತು. ಕಾರಣ, ಮೊನ್ನೆಯಷ್ಟೇ ಆಕೆ ಗುಣಮುಖರಾಗಿದ್ದು ಖಾಸಗಿ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದಾರೆ. ನಿನ್ನೆ ಇದ್ದಕ್ಕಿದ್ದಂತೆ ಸತ್ತು ಹೋಗಿದ್ದೇನೆ ಎಂದರೆ ನಂಬುವುದಕ್ಕೆ ಸ್ವಲ್ಪ ಕಷ್ಟವೇ ಆಗಿತ್ತು. ಆದರೂ ಕೂಡ, ಆಕೆಯ ಅಧಿಕೃತ ಪೇಜ್‌ನಿಂದಲೇ ಸುದ್ದಿ ಬಂದಿದ್ದರಿAದ ಯಾರೋ ಆಕೆಯ ಆಪ್ತರು ಪೋಸ್ಟ್ ಮಾಡಿರಬೇಕೆಂದು ಎಲ್ಲರೂ ಅಂದುಕೊಳ್ಳುವAತಾಗಿದೆ.
ಅದರೆ, ನಟಿ ಪೂನಂ ಪಾಂಡೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ಮೀಡಿಯಾಗಳು ಸೇರಿದಂತೆ ಜಗತ್ತನ್ನೇ ಮರುಳು ಮಾಡಲು ಯತ್ನಿಸಿದ್ದಾರೆ. ಹೀಗೆ ಸುಳ್ಳು ಹೇಳಿ ಸುದ್ದಿ ಹಬ್ಬಿಸಿರುವ ನಟಿ ಪೂನಂ ಪಾಂಡೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಜನರು ಛೀ ಥೂ ಎಂದು ಉಗಿಯತೊಡಗಿದ್ದಾರೆ. ಇನ್ನು ಪೂನಂ ಪಾಂಡೆ ಏನು ಹೇಳಿದರೂ ನಂಬುವುದಿಲ್ಲ ಎಂದೂ ಕೆಲವರು ಹೇಳಿದ್ದಾರೆ.

 
 

 

 
 

 

 
 

 

 
 

Leave a Reply

Your email address will not be published. Required fields are marked *