Share this news

ಚೆನ್ನೈ: ಮಕ್ಕಳಿಗೆ ಪ್ರಿಯವಾದ ತಿನಿಸುಗಳಲ್ಲಿ ಒಂದಾದ ಕಾಟನ್ ಕ್ಯಾಂಡಿ (ಸಕ್ಕರೆ ಮಿಠಾಯಿ, ಬಾಂಬೆ ಮಿಠಾಯಿ) ಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ಮಾರಾಟಕ್ಕೆ ತಮಿಳು ನಾಡು ಸರ್ಕಾರ ನಿಷೇಧ ಹೇರಿದೆ.

ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳನ್ನು ಬಳಸಿ ಕಾಟನ್ ಕ್ಯಾಂಡಿ ತಯಾರಿ ಆರೋಪ ಬಂದ ಹಿನ್ನೆಲೆಯಲ್ಲಿ ತ.ನಾಡಿನಲ್ಲಿ ವಿವಿಧೆಡೆ ಮಾರಾಟವಾಗುವ ಕಾಟನ್‌ ಕ್ಯಾಂಡಿ ಪರೀಕ್ಷೆ ನಡೆಸಲಾಗಿತ್ತು.ಕ್ಯಾಂಡಿಗೆ ಬಣ್ಣ ನೀಡಲು ಬಳಸುವ ರಾಸಾಯನಿಕದಲ್ಲಿ ಕ್ಯಾನ್ಸ‌ರ್ ತರುವ ಅಂಶ ದೃಢ ವಾಗಿದೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಎಂದ ಸರ್ಕಾರ ಹೀಗಾಗಿ ರಾಜ್ಯಾದ್ಯಂತ ಕಾಟನ್ ಕ್ಯಾಂಡಿ ನಿಷೇಧಿಸಿ ತ.ನಾಡು ಸರ್ಕಾರ ಆದೇಶ ಹೊರಡಿಸಿದೆ.

 

 

Leave a Reply

Your email address will not be published. Required fields are marked *