ಕಾರ್ಕಳ: ನೆಹರೂ ಯುವಕೇಂದ್ರ ಉಡುಪಿ ಹಾಗೂ ಮಹಿಳಾ ಶಕ್ತಿ ಮರ್ಣೆ ಇವರ ಜಂಟೀ ಆಶ್ರಯದಲ್ಲಿ ಮಹಿಳಾ ದಿನಾಚರಣೆಯು ಭಾನುವಾರ ಅಜೆಕಾರು ರಾಮ ಮಂದಿರ ಸಭಾಂಗಣದಲ್ಲಿ ನಡೆಯಿತು.
ಜಿ.ಪಂ ಮಾಜಿ ಸದಸ್ಯೆ ಜಲಜಾ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಣೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿ.ಎ.ಬ್ಯಾಂಕ್ ನ ನಿರ್ದೇಶಕಿ ವಿದ್ಯಾವಿಜೇತ ಪೈ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯಾಧಿಕಾರಿ ಚಂದ್ರಿಕಾ ಕಿಣಿ ಹೆಣ್ಣು ಭ್ರೂಣ ಹತ್ಯೆ ನಿಷೇದ ಹಾಗು ಮಹಿಳೆಯರ ಆರೋಗ್ಯಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ಮಹಿಳಾ ಕ್ರೀಡಾ ಸಾಧಕಿ ವಿದ್ಯಾವಿಜೇತ ಪೈ ಇವರು ತಮ್ಮ ಕ್ರೀಡಾ ಸಾಧನೆಯ ಬಗ್ಗೆ ವಿವರಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಧರಿತ್ರಿ ಪ್ರಾರ್ಥಿಸಿ, ಜ್ಯೋತಿ ಪೂಜಾರಿ ಸ್ವಾಗತಿಸಿ, ಸುಜಾತಾ ಆಚಾರ್ಯ ವಂದಿಸಿದರು. ಜಲಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






