ನವದೆಹಲಿ: ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹಜ್ ಸಮಿತಿ ಸ್ವಾಗತಿಸಿದೆ.
ಹಜ್ ಸಮಿತಿ ಅಧ್ಯಕ್ಷೆ ಕೌಸರ್ ಜಹಾನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ‘ಪೌರತ್ವ ನೀಡಲು ಈ ಕಾಯ್ದೆ ಜಾರಿಯಾಗಿದೆಯೇ ಹೊರತು ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಎ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆ ಅತ್ತ ದೆಹಲಿ ಹಜ್ ಸಮಿತಿಯ ಅಧ್ಯಕ್ಷೆ ಕೌಸರ್ ಜಹಾನ್ ಈ ಕ್ರಮವನ್ನು ಸ್ವಾಗತಿಸಿದ್ದು, ಕೇಂದ್ರ ಗೃಹ ಸಚಿನ ಅಮಿತ್ ಶಾ ಸಿಎಎ ಜಾರಿ ಕುರಿತು ಘೋಷಣೆ ಮಾಡುತ್ತಲೇ ದೇಶದ ಮುಸ್ಲಿಮರಲ್ಲಿ ಆತಂಕ ಶುರುವಾಗಿದೆ. ಆದರೆ ಆತಂಕಕ್ಕೆ ಯಾವುದೇ ಕಾರಣಗಳಿಲ್ಲ, ದೇಶದ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ, ಈ ಕಾನೂನು ಪೌರತ್ವವನ್ನು ನೀಡಲು, ಅದನ್ನು ಕಸಿದುಕೊಳ್ಳಲು ಅಲ್ಲ. ನಾನು ಈ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಸ್ಥಿತಿ ಚೆನ್ನಾಗಿಲ್ಲ, ಅವರಿಗೆ ಗೌರವಯುತ ಜೀವನ ನೀಡಲು ಸರ್ಕಾರ ಬಯಸಿದರೆ, ಆಗ ಏನು ಮಾಡಬೇಕು? ಇದಕ್ಕಾಗಿ ಪರಿಹಾರ ಮಾಡಬೇಕಾಗಿದೆ. ಆ ಸಮಸ್ಯೆಗೆ ಪರಿಹಾರವೇ ಸಿಎಎ ಜಾರಿಯಾಗಿದೆ. ಇದರಿಂದ ಏನಾದರೂ ಸಮಸ್ಯೆ ಇದೆಯೇ? ಇದರಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಆದ್ದರಿಂದ ಮುಸ್ಲಿಮರು ಗಾಬರಿಪಡುವ ಅಗತ್ಯವೇ ಇಲ್ಲ.ಭಾರತೀಯ ಮುಸ್ಲಿಮರು ಇನ್ನುಮುಂದೆಯೂ ಭಾರತದಲ್ಲಿ ಅತ್ಯಂತ ಸುರಕ್ಷಿತರಾಗಿ ಇರುತ್ತಾರೆ.ಆದ್ದರಿಂದ ಮುಸ್ಲಿಮರು ಊಹಾಪೋಹಗಳಿಗೆ ಕಿವಿಗೊಡದೇ ನಿಶ್ಚಿಂತರಾಗಿರಬಹುದು ಎಂದು ಕೌಸರ್ ಸ್ಪಷ್ಟಪಡಿಸಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






