ಕಾರ್ಕಳ: ಸ್ಕೂಟರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಕಾರ್ಕಳದ ಜೋಡುಕಟ್ಟೆ ಬಳಿಯ ಪವರ್ ಪಾಯಿಂಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು ಸ್ಕೂಟರ್ ಸವಾರ ಸತೀಶ್(46) ಎಂಬವರು ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರ ಸತೀಶ್ ಎಂಬವರು ಗುರುವಾರ ಬೆಳಗ್ಗೆ ಕಾರ್ಕಳ ಕಡೆಯಿಂದ ರೆಂಜಾಳಕಡೆಗೆ ತನ್ನ ಎಲೆಕ್ಟಿçಕ್ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಜೋಡುಕಟ್ಟೆ ಬಳಿ ಬಜಗೋಳಿ ಕಡೆಯಿಂದ ಕಾರು ಚಾಲಕ ಅತೀವೇಗವಾಗಿ ಬಂದು ರಸ್ತೆಯ ಬಲಬದಿಗೆ ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಈ ಅಪಘಾತದಿಂದ ಸವಾರ ಸತೀಶ್ ಕಾರಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ]
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






