ಬೆಂಗಳೂರು: ಕಳೆದ ಎರಡು ವಾರಗಳ ಹಿಂದಷ್ಟೇ ನಗರದ ರೆಸಾರ್ಟ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ನಶೆ ಏರಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟ ಬಳಿಕ ಈ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ತೆಲುಗು ನಟಿ ಹೇಮಾ ಹಾಜರಾಗಿದ್ದರು. ವಿಚಾರಣೆ ಮುಗಿಸಿದ ಸಿಸಿಬಿ ಪೊಲೀಸರು,ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿದರು.
ನ್ಯಾಯಮೂರ್ತಿ ಸಲ್ಮಾ ಎ ಎಸ್ ಅವರು ವಿಚಾರಣೆ ನಡೆಸಿ, ನಟಿ ಹೇಮಾ ಅವರಿಗೆ ಜೂನ್.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದ್ದಾರೆ.
ಇದೇವೇಳೆ ಬಂಧನದಿಂದ ಕೆಂಡಾಮಂಡಲವಾದ ನಟಿ ಹೇಮಾ ಮಾಧ್ಯಮಗಳ ವಿರುದ್ಧ ಕೂಗಾಡಿ ಹೈಡ್ರಾಮಾ ನಡೆಸಿದರು