Share this news

ಕಾರ್ಕಳ:ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಕೊಡುವುದಾಗಿ ನಂಬಿಸಿದ ವ್ಯಕ್ತಿಯೋರ್ವ ಡಿಮ್ಯಾಟ್ ಖಾತೆ ತೆರೆದು ಪಿರ್ಯಾದಿದಾರರಾದ ಜಾಯ್ಸನ್‌ ಬರೋಬ್ಬರಿ 32 ಲಕ್ಷ ರೂ ಪಂಗನಾಮ ಹಾಕಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳದ ಜಾಯ್ಸನ್ ವಿಲಿಯಂ ಡಿಸೋಜಾ ಎಂಬವರು ಮೋಸಕ್ಕೆ ಒಳಗಾದವರು. ಅವರಿಗೆ ಮೋರ್ಗನ್ ಇನ್ಸಿಟುಷನ್ ಎಂಬ ಹೆಸರಿನಲ್ಲಿ ಜೆಪಿಎಮ್ ಪ್ರೋ ಆಪ್ ಲಿಂಕ್‌ ಮತ್ತು ಎಲ್ಟಾಸ್ ಫುಡ್ ಆಪ್ ಲಿಂಕ್ ನ್ನು ಕಳುಹಿಸಿದ ವ್ಯಕ್ತಿ ಲಾಭಾಂಶ ಕೊಡುವುದಾಗಿ ಡಿಮ್ಯಾಟ್ ಅಕೌಂಟನ್ನು ತೆರೆಸಿ ಹೂಡಿಕೆ ಮಾಡುವಂತೆ ನಂಬಿಸಿ ವಿಲಿಯಂ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಂದ ದಿನಾಂಕ ಏ 15 ರಿಂದ ಮೇ 30ರ ವರೆಗೆ ಹಂತ ಹಂತವಾಗಿ ರೂಪಾಯಿ 32,21,587 ರೂಪಾಯಿ ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಬಳಿಕ ಜಾಯ್ಸನ್ ಖಾತೆಗೆ ಕೇವಲ 7 ಲಕ್ಷ ಹಣವನ್ನು ಮರುವರ್ಗಾವಣೆ ಮಾಡಿ, ಉಳಿದ ರೂಪಾಯಿ 25,21,587 ಹಣವನ್ನು ನೀಡದೇ ಮೋಸ ಮಾಡಿರುವ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *