ಕಾರ್ಕಳ: ನಿವೃತ್ತ ಶಿಕ್ಷಕ ಹಾಗೂ ಮಿಲ್ಲಿನ ಮಾಸ್ಟ್ರು ಎಂದೇ ಚಿರಪರಿಚಿತರಾಗಿದ್ದ ಎಣ್ಣೆಹೊಳೆ ಶಂಕರ ಹೆಗ್ಡೆ (80ವ)ಬುಧವಾರ ಮುಂಜಾನೆ 6 ಗಂಟೆ ಸುಮಾರಿಗೆ ಎಣ್ಣೆಹೊಳೆಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮುನಿಯಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಇದಲ್ಲದೇ ಶಂಕರ ಹೆಗ್ಡೆಯವರು ಅಜೆಕಾರು ಸಿ ಎ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ತಾವು ಶಿಕ್ಷಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅಕ್ಕಿ ಗಿರಣಿ ನಡೆಸುತ್ತಿದ್ದ ಕಾರಣದಿಂದ ಅವರಿಗೆ ಮಿಲ್ಲಿನ ಮಾಸ್ಟ್ರು ಎಂಬ ಹೆಸರು ಅನ್ವರ್ಥಕವಾಗಿ ಬಂದಿತ್ತು. ಬಳಿಕ ಅವರು ನಿವೃತ್ತರಾದರೂ ಅವರನ್ನು ಇಂದಿಗೂ ಎಲ್ಲರೂ ಇದೇ ಹೆಸರಿನಲ್ಲಿ ಕರೆಯುತ್ತಿದ್ದರು.
ಮೃತರು ಪತ್ನಿ,ನಾಲ್ವರು ಪುತ್ರಿಯರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
