ಬೆಂಗಳೂರು: ರಾಜ್ಯದ ಎಲ್ಲ ಸಾರಿಗೆ ಇಲಾಖೆ ನೌಕರರಿಗೂ ಕೂಡ ಸರ್ಕಾರಿ ನೌಕರರಿಗೆ ವೇತನ ಪಾವತಿಸುವ ಮಾದರಿಯಲ್ಲಿಯೇ ಹೆಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ವೇತನ ಪಾವತಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.
ಕೆಎಸ್‌ಆರ್‌ಟಿಸಿಯ ಎಲ್ಲ ನೌಕರರಿಗೆ ಆಗಸ್ಟ್ ತಿಂಗಳಿAದ HRMS ತಂತ್ರಾಂಶದನ್ವಯ ವೇತನ ಪಾವತಿಸುವಂತೆ ಆದೇಶ ಹೊರಡಿಸಲಾಗಿದ್ದು, ಈ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜೆ ಮಂಜೂರಾತಿಯನ್ವಯ ವೇತನ ಪಾವತಿ ಕಡ್ಡಾಯ. HRMS ವೇತನ ಹೊರತುಪಡಿಸಿ ಬೇರೆ ಮಾದರಿಯ ವೇತನ ಬಿಲ್ಲು ತಯಾರಿಸಲು ಅವಕಾಶವಿಲ್ಲ. ಹೆಚ್‌ಆರ್‌ಎಂಎಸ್ ಅಡಿಯಲ್ಲಿ ಸಂಬಳ ನೀಡುವಂತೆ ಕಳೆದ 2020 ರಿಂದ ನೌಕರರು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಬಹುದಿನಗಳ ನೌಕರರ ಬೆಡಿಕೆಯನ್ನು ಈಡೇರಿಸಲಾಗಿದೆ. ಆಗಸ್ಟ್ ತಿಂಗಳ ವೇತನದಿಂದಲೇ ಹೊಸ ತಂತ್ರಾಂಶದ ಮೂಲಕ ವೇತನ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.
ಇನ್ನು ಈ HRMS ತಂತ್ರಾಂಶದ ಮೂಲಕ ವೇತನ ಪಾವತಿಸುವುದರಿಂದ ನೌಕಕರಿಗೆ ಅನೇಕ ಸೌಲಭ್ಯಗಳು ಸಿಗಲಿವೆ. ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು ಪಡೆಯಬಹುದು, ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು. ತಮ್ಮ ಸಾಲ ಅಥವಾ ಮುಂಗಡದ ವಿವರಗಳನ್ನು ವೀಕ್ಷಿಸಬಹುದು.
ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ, ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ, ಎನ್‌ಪಿಎಸ್, ಮುಂತಾದವುಗಳನ್ನು ನೋಡಬಹುದು. ಅಲ್ಲದೆ ಇದರಿಂದ ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.














`
