Share this news

ಹೈದರಾಬಾದ್: ಎನ್​ಐಎ ತಂಡವು ಮೂವರು ಉಗ್ರರನ್ನು ಬಂಧಿಸಿದ್ದು, ಅವರಿಂದ ಹ್ಯಾಂಡ್ ಗ್ರೆನೇಡ್​ ಅನ್ನು ವಶಪಡಿಸಿಕೊಂಡಿದೆ.

ಅಬ್ದುಲ್​ ಜಾಹೀದ್​ ಸೇರಿದಂತೆ ಮೂವರು ಉಗ್ರರರನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ. ಇವರು ಹೈದರಾಬಾದ್​​​ನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. UAPA ಕಾಯ್ದೆಯಡಿ ಎಫ್ಐಆರ್ ಎನ್​ಐಎ ಎಫ್​ಐಆರ್ ದಾಖಲಿಸಿದೆ. 2005 ರಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಜಾಹೆದ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2017ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಅಬ್ದುಲ್ ಜಾಹೀದ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸೂಚನೆಗಳ ಆಧಾರದ ಮೇಲೆ ಹೈದರಾಬಾದ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ. ಆರೋಪಿಗಳ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

                        

                          

                        

                       

Leave a Reply

Your email address will not be published. Required fields are marked *