Share this news

ಅಜೆಕಾರು: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರಿನಲ್ಲಿ ಶುಕ್ರವಾರ ನಡೆದಿದೆ.

ಅಜೆಕಾರಿನ ಅಂತೋನಿ ಪಿರೇರಾ (63) ಆತ್ಮಹತ್ಯೆ ಮಾಡಿಕೊಂಡವರು. ಅವರು ಸುಮಾರು 5 ವರ್ಷಗಳಿಂದ ಹೃದಯ ಸಂಬAಧಿ ಹಾಗೂ ಮೊಣಕಾಲು ಗಂಟು ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಅಪರೇಷನ್ ಕೂಡಾ ನಡೆದಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ತಮ್ಮ ಅನಾರೋಗ್ಯದ ವಿಚಾರ ಅಥವಾ ಇನ್ಯಾವುದೋ ಕಾರಣಕ್ಕೆ ಮನನೊಂದ ಅಂತೋನಿ ಅವರು ಶುಕ್ರವಾರ ಸಂಜೆ ಮನೆಯ ಸಿಟೌಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

                        

                          

                        

                       

Leave a Reply

Your email address will not be published. Required fields are marked *