ಕಾರ್ಕಳ: ಮುಡಾರಿನ ಮನೆಯೊಂದರಲ್ಲಿ ಸೆ. 26 ರ ಗುರುವಾರ ಗಾಂಜಾ ಪತ್ತೆಯಾಗಿದ್ದು, ಗಾಂಜಾ ಸಹಿತ ಆರೋಪಿಯನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.
ಮುಡಾರು ಗ್ರಾಮದ ಮಿಯಾರು ಸೇತುವೆ ಬಳಿಯ ಶಾಜಿ ಮ್ಯಾಥ್ಯೂ ಎಂಬವರು 2023ರಲ್ಲಿ ಗಾಂಜಾ ಕೇಸ್ಗೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶೋಧನ ವಾರಂಟನ್ನು ಜಾರಿ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸೆ. 26 ಗುರುವಾರದಂದು ಹೆಬ್ರಿ ಪೊಲೀಸ್ ಠಾಣಾ ಪಿಎಸ್ಐ ಮಹಾಂತೇಶ್ ಜಾಬಗೌಡ, ಸಿಬ್ಬಂದಿ ರಕ್ಷಿತ್, ಪ್ರಸನ್ನ ಅವರು ಮನೆಗೆ ಭೇಟಿ ನೀಡಿದ್ದು,ಈ ವೇಳೆ ಮನೆಯ ಸ್ಟೋರ್ ರೂಮ್ ನ ಸೋಫಾದಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ನಿಷೇಧಿಸ ಮಾದಕ ವಸ್ತುವಾದ ಗಾಂಜಾದ ಎಲೆ, ಹೂವು ಮತ್ತು ಮೊಗ್ಗಿನ ಭಾಗಗಳು ಪತ್ತೆಯಾಗಿದೆ.
ಈ ಕುರಿತು ಶಾಜಿ ಮ್ಯಾಥ್ಸ್ಯೂ ಅವರ ಮಗ ಸುನಿಲ್ ಜೋಸೆಫ್ ಟಿ. ಎಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.







in 
