ವಿಜಯಪುರ: ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ಹಿಂದೂಸ್ಥಾನದಲ್ಲಿ ಇರುವ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮತಾಂತರ ಆದವರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಹಿಂದೂ ಆಸ್ತಿಗಳ ಸಂರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊನ್ನೆ ವಿಜಯಪುರಕ್ಕೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ಆದರೆ, ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅವರಪ್ಪನ ಆಸ್ತಿಯಲ್ಲ ಎಂದು ಹೇಳಿದ್ದಾರೆ. ನೀನು ನಮ್ಮಪ್ಪನ ಆಸ್ತಿಯಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ನಿವೇನು ಹಿಂದೂಸ್ಥಾನದಲ್ಲಿ ಇದ್ದೀರಲ್ಲ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮುಸ್ಲಿಂ ಆಗಿದ್ದೀರಿ. ನಮ್ಮ ಹಿರಿಯರು ಮುತ್ತಜ್ಜರು ಯಾವುದಕ್ಕೂ ಹೆದರದೇ ಹಿಂದೂಗಳಾಗಿಯೇ ಉಳಿದುಕೊಂಡು ವಿಭೂತಿ ಕುಂಕುಮ ಹಚ್ಚಿಕೊಂಡು ಎಲ್ಲವನ್ನೂ ಎದುರಿಸಿ ಬಂದಿದ್ದಾರೆ. ಅವರು ನಿಜವಾದ ಹಿಂದೂ ಹುಲಿಗಳು. ನಿಮ್ಮಪ್ಪನೇ ಕಂಟ್ರಿ (ದೇಸಿ) ಇದ್ದಾನೆ. ನೀವೇನು ಅರಬ್ ಕಂಟ್ರಿಯವರಿಗೆ ಹುಟ್ಟಿಲ್ಲ ಎಂದು ಹೇಳಿದರು.
ವಿಜಯಪುರದಲ್ಲಿ ಕೆಲವು ಹಂದಿಗಳನ್ನು ನಿನ್ನೆ ಮಾತನಾಡಿದ್ದಾರೆ. ವಿಜಯಪುರವನ್ನು ಸ್ವಚ್ಛ ಮಾಡಲಿಕ್ಕೆ ಕೆಲವು ಹಂದಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಒಂದೊಂದು ದಿನ ಸುದ್ದಿಗೋಷ್ಠಿ ಕರೆದು ನಮ್ಮ ಬಗ್ಗೆ ಮಾತನಾಡಿದ್ದಾರೆ. ನೀವು ನಿಮ್ಮಪ್ಪನಿಗೆ ಖರೆ ಹುಟ್ಟಿದ್ದರೆ ನಿಮ್ಮ ಬಳಿ ಏನೇನು ದಾಖಲೆಗಳಿವೆ ಅವುಗಳನ್ನು ಹೊರಗೆ ತೆಗೆಯಿರಿ. ಜಮೀರ್ ಅಹಮದ್ ವಿಧಾನಸಭೆಯನ್ನು ನನ್ನನ್ನು ಕೇಳಿದರು. ಆಗ ಹಿಂದೂ ಮುಸ್ಲಿಂ ಬಗ್ಗೆ ಮಾತನಾಡಿದ್ದಕ್ಕೆ ಜಮೀರ್ ಅಹಮದ್ ಖಾನ್ ಬಂದು ನಮ್ಮ ಬಗ್ಗೆ ಹೀಗೆಲ್ಲಾ ಮಾತನಾಡಬೇಡಿ ಎಂದು ಹೇಳಿದರು. ಹೌದು, ಮಾತನಾಡಿದ್ದೇನೆ ನೀವು ಏನು ಮಾಡಿಕೊಳ್ತೀರಿ ಎಂದು ಹೇಳಿದೆ. ಇದಾದ ನಂತರ ಜಮೀರ್ ಅಹಮದ್ ಖಾನ್ ವಿಜಯಪುರಕ್ಕೆ ಬಂದು ಮುಂದಿನ ಬಾರಿ ವಿಜಯಪುರದಲ್ಲಿ ಮುಸ್ಲಿಂ ವ್ಯಕ್ತಿಯೇ ಶಾಸಕ ಆಗುತ್ತಾನೆ ಎಂದು ಹೇಳಿದ್ದಾರೆ. ಬೇಕಾದರೆ ಜಮೀರ ಅಹಮದ್ ಖಾನ್ ನೀನೇ ಬಂದು ನನ್ನ ಎದುರಿಗೆ ಸ್ಪರ್ಧೆ ಮಾಡಿ ಗೆಲ್ಲು. ಈಗಾಗಲೇ ಈ ಹಿಂದೆ ಸಿಎಂ ಇಬ್ರಾಹಿಂ ನನ್ನ ಮುಂದೆ ಬಂದು ಕಿಸಿದು ವಾಪಾಸ್ ಹೋಗಿದ್ದಾನೆ ಎಂದು ಹೇಳಿದರು.




























