Share this news

ಉಡುಪಿ : ಮನೆಯಿಂದ ನಾಪತ್ತೆಯಾಗಿರುವ ಯುವಕನ ಮೃತದೇಹವು ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಪತ್ತೆಯಾದ ಘಟನೆಯು ಶನಿವಾರ ನಡೆದಿದೆ.

ಮೃತ ಯುವಕನನ್ನು ಮಧ್ವನಗರ ಮೂಡಬೆಟ್ಟುವಿನ ನಿವಾಸಿ, ಸುಮನೇಶ್ ಹೆಗ್ಡೆ (42ವ) ಎಂದು ಗುರುತಿಸಲಾಗಿದೆ. ಸುಮನೇಶ್ ವಿವಾಹಿತನಾಗಿದ್ದು, ಖಾಸಗಿ ಬಸ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಮನೆಯಿಂದ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರೆಂದು ತಿಳಿದುಬಂದಿದೆ. ಯುವಕ ಆತ್ಮಹತ್ಯೆಗೈದಿರುವ ಶಂಕೆವ್ಯಕ್ತವಾಗಿದೆ. ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನದಿಯಲ್ಲಿ ತೇಲಿ ಬರುತ್ತಿದ್ದ ಶವವನ್ನು ಗಮನಿಸಿದ ಮಾಜಿ ನಗರಸಭೆ ಸದಸ್ಯ ಚಿನ್ಮಯಮೂರ್ತಿ ಮತ್ತು ಅವರ ತಂಡವು ಶವವನ್ನು ದಡಕ್ಕೆ ಸೇರಿಸಿತು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿಡುವ ವ್ಯವಸ್ಥೆಗೊಳಿಸಿದರು.

Leave a Reply

Your email address will not be published. Required fields are marked *