ಶಿವಮೊಗ್ಗ: ನಗರದ ಕಾರ್ತಿಕ್ ಮೋಟಾರ್ಸ್ ಶೋರೂಂ ವೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಈ ಘಟನೆಯಿಂದಾಗಿ ಶೋ ರೂಂನಲ್ಲಿದ್ದ ಕೆಲವು ವಾಹನಗಳು ಬೆಂಕಿಗಾಹುತಿಯಾಗಿದೆ. ಮಾತ್ರವಲ್ಲದೇ ಒಳಾಂಗಣ ವಿನ್ಯಾಸ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ತೀವ್ರ ತರದಲ್ಲಿ ಉರಿಯುತ್ತಿದ್ದರಿಂದ ಮೂರ್ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ.
ಇನ್ನು ಘಟನೆಗೆ ಕಾರಣ ಅನುಮಾನಸ್ಪದವಾಗಿದ್ದು. ಕಾರ್ತಿಕ್ ಶೋರೂಮ್ ಮಾಜಿ ಉದ್ಯೋಗಿ ಒಬ್ಬ ಈ ಕೃತ್ಯವೆಸಗಿದ್ದಾಗಿ ಸಂಶಯ ವ್ಯಕ್ತವಾಗಿದೆ. ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಆತನ ವಿಚಾರಣೆ ನಡೆಯುತ್ತಿದೆ.





























