Share this news

ಮಂಗಳೂರು: ಪತ್ನಿ ಮತ್ತು ಮಗನನ್ನು ಚೂರಿಯಿಂದ ಇರಿದು ಕೊಲೆಗೈದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವAತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. ಪತ್ನಿ ಪ್ರಿಯಾಂಕಾ(28), ಪುತ್ರ ಹೃದಯ್(4) ಕೊಲೆ ಮಾಡಿ ಕಾರ್ತಿಕ್ ಭಟ್(32) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಹಕಾರಿ ಬ್ಯಾಂಕ್ ಒಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಾರ್ತಿಕ್ ಭಟ್ ಪತ್ನಿ, ಮಗನನ್ನು ಕೊಂದು ಬಳಿಕ ತಾವು ಮುಲ್ಕಿ ಹೊರವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ತಿಕ್ ಶವ ಸಿಕ್ಕಿದ ಬಳಿಕ ಆತ ವಾಸವಾಗಿದ್ದ ಫ್ಲ್ಯಾಟ್ ಬಳಿಗೆ ಬಂದ ಪೊಲೀಸರಿಗೆ ಪತ್ನಿ, ಪುತ್ರನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಸೊಸೆ ಮತ್ತು ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ವೃದ್ಧ ಅತ್ತೆ ಮಾವನಿಗೆ ಗೊತ್ತೆ ಆಗಿರಲಿಲ್ಲ. ಮೃತ ಕಾರ್ತಿಕ್ ತಂದೆ ಜನಾರ್ದನ ಭಟ್ ಅವರು ಪಕ್ಷಿಕೆರೆ ಜಂಕ್ಷನ್ ಲ್ಲಿ ಹೋಟೆಲ್ ನಡೆಸುತ್ತಿದ್ದರು. ನಿನ್ನೆ ಬೆಳಗ್ಗೆಯೂ ದಂಪತಿಗಳಿಬ್ಬರೂ ಮನೆಯಿಂದ ಹೋಟೆಲ್ ಗೆ ತೆರಳಿದ್ದರು. ಈ ವೇಳೆ ಹೆಂಡತಿ ಮತ್ತು ಮಗುವನ್ನು ಕೋಣೆಯೊಳಗೆ ಕಾರ್ತಿಕ್ ಹತ್ಯೆ ಮಾಡಿದ್ದಾರೆ. ಕಾರ್ತಿಕ್ ಪತ್ನಿಗೆ ತನ್ನ ಮಾವ ಅತ್ತೆಯೊಂದಿಗೆ ಮನಸ್ತಾಪವಿತ್ತು ಮಾಹಿತಿ ಇದೆ. ಮನೆಯ ಕೋಣೆಯಲ್ಲಿ ಮತೃ ಕಾರ್ತಿಕ್ ಕುಟುಂಬ ಪ್ರತ್ಯೇಕವಾಗಿದ್ದು, ಇಡೀ ದಿನ ಮನೆಯ ಕೋಣೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿಯೂ ಮಗ, ಸೊಸೆ ಮತ್ತು ಮೊಮ್ಮಗ ಕೋಣೆಯಲ್ಲಿಯೇ ಇದ್ದಾರೆಂದು ಮಾವ ಜನಾರ್ದನ ಭಾವಿಸಿದ್ದರು. ಇಂದು ಬೆಳಗ್ಗೆ ಕೂಡ ಎಂದಿನAತೆ ಅವರು ಹೋಟೆಲ್ ಗೆ ತೆರಳಿದ್ದಾರೆ. ಮಧ್ಯಾಹ್ನ ಕಾರ್ತಿಕ್ ವಿಳಾಸ ಹುಡುಕಿಕೊಂಡು ಪಕ್ಷಿಕೆರೆಯ ಮನೆಗೆ ಪೊಲೀಸರು ಬಂದಿದ್ದಾರೆ. ಮನೆಯ ಕೋಣೆಯ ಬಾಗಿಲು ತೆರೆದಾಗ ಕಾರ್ತಿಕ್ ಪತ್ನಿ, ಮಗ ಮೃತದೇಹ ಪತ್ತೆ ಆಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *