Share this news

ಉಡುಪಿ: ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಸೋಮವಾರ ರಾತ್ರಿ ಮೀಟಿಂಗ್ ರೂಮ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ರೂಮ್ ಸಂಪೂರ್ಣ ಸುಟ್ಟು ಹೋಗಿದೆ.

ಬೆಳಗ್ಗೆ ಕಚೇರಿ ತೆರೆದಾಗಲೇ ಬೆಂಕಿ ಬಿದ್ದಿರುವ ವಿಚಾರ ಬೆಳಕಿಗೆ ಬಂದಿದ್ದು, ಅಲ್ಪಸ್ವಲ್ಪ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದವರು ಬಂದು ನಂದಿಸಿದ್ದಾರೆ. ಕೋಣೆಯಲ್ಲಿದ್ದ ಎಸಿ ಸ್ಫೋಟಗೊಂಡಿದ್ದು, ಎಲ್ಲಾ ಕಡತಗಳು ಸುಟ್ಟು ಬೂದಿಯಾಗಿದೆ. ಫ್ಯಾನ್, ಚಯರ್, ಟೇಬಲ್, ಲೈಫ್‌ಬಾಯ್, ಲೈಫ್ಜಾಕೆಟ್, ಸೇರಿದಂತೆ ಪಾರ್ಟಿಶನ್ ಗೋಡೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಅಂತಹ ದುರ್ಘಟನೆ ಸಂಭವಿಸಿಲ್ಲ.

ದಟ್ಟವಾದ ಹೊಗೆ ಕಟ್ಟಡದ ಎಲ್ಲ ಕೋಣೆಗಳನ್ನು ಆವರಿಸಿದ್ದು, ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಮಲ್ಪೆ ಠಾಣೆಗೆ ದೂರು ನೀಡಲಾಗಿದೆ.

 

Leave a Reply

Your email address will not be published. Required fields are marked *