Share this news

ಅಜೆಕಾರು,ಆ,16:ನಾವು ಮಾಡುವ ಯಾವುದೇ ಕೆಲಸಕಾರ್ಯಗಳಾಗಲಿ ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಮಾಡಬೇಕು. ಭಗವಂತನ ಮೇಲೆ ನಂಬಿಕೆಯಿಟ್ಟು ಮಾಡುವ ದುಡಿಮೆಗೆ ತಕ್ಕ ಪ್ರತಿಫಲ ಖಂಡಿತವಾಗಿ ಸಿಗುತ್ತದೆ ಎಂದು ಮುಂಬಯಿಉದ್ಯಮಿ ಶಿವರಾಮ ಜಿ ಶೆಟ್ಟಿ ಹೇಳಿದರು.
ಅವರು ಭಾನುವಾರ ಅಜೆಕಾರಿನ ಅಜೆಕಾರ್ ಕಾಂಪ್ಲೆಕ್ಸ್ ನಲ್ಲಿ ನೂತನ ಬಾಲಾಜಿ ಬೇಕರಿ & ಕ್ರೀಂ ಪಾರ್ಲರ್ ಉದ್ಘಾಟಿಸಿ, ಉದ್ಯಮದಲ್ಲಿ ಗುಣಮಟ್ಟದಲ್ಲಿ ರಾಜಿಯಾಗಬಾರದು,ಸದಾ ನಗುಮುಖದ ಸೇವೆಯಿಂದ ಪ್ರಾಮಾಣಿಕವಾದ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಅಜೆಕಾರು ಡಾ.ಸುಧಾಕರ ಶೆಟ್ಟಿ ಮಾತನಾಡಿ,ಪರೋಪಕಾರಂ ಇದಂ ಶರೀರಂ ಎನ್ನುಚಂತೆ ನಾವು ನಮ್ಮ ಬದುಕಿನಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡುವ ಗುಣ ರೂಢಿಸಿಕೊಳ್ಳಬೇಕು ಆಗ ನಮ್ಮನ್ನು ಭಗವಂತ ಕೈಹಿಡಿದು ನಡೆಸುತ್ತಾನೆ.ನಾವು ಮಾಡುವ ಕೆಲಸವನ್ನು ಧೈರ್ಯದಿಂದ ಅಚಲವಾದ ನಂಬಿಕೆಯಿಂದ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ.ಯಾಕೆಂದರೆ ನಾನು 2013ರಲ್ಲಿ ಕಷ್ಟಪಟ್ಟು ಕಟ್ಟಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಇಂದು‌ ನೂರಾರು ಕುಟುಂಬಗಳಿಗೆ ಬದುಕು ಕೊಟ್ಟಿದೆ ಎನ್ನುವ ಖುಷಿ ನನಗಿದೆ,ನಮ್ಮ ಸಂಸ್ಥೆಯಲ್ಲಿ ಕಲಿತ 156 ವಿದ್ಯಾರ್ಥಿಗಳಿಗೆ ಈ ಬಾರಿ MBBS ಸೀಟ್ ಸಿಕ್ಕಿದೆ ಎಂದರೆ ಇದು ಹಲವಾರು ವರ್ಷಗಳ ಶ್ರಮ ಹಾಗೂ ಸಾಧನೆಯ ಪ್ರತಿಫಲ ಎಂದು ನೂತನ ಉದ್ಯಮಕ್ಕೆ ಶುಭಹಾರೈಸಿದರು.
ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಹೆಗ್ಡೆ ನೂತನ ಉದ್ಯಮಕ್ಕೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗುರುಸ್ವಾಮಿ ಪಿ.ಕರುಣಚಂದ್ರ, ಉದ್ಯಮಿ ಬಾಲಕೃಷ್ಣ ಹೆಗ್ಡೆ, ಉದ್ಯಮಿ ಅಪ್ಸರ್ ಶೇಕ್,ಶ್ರೀರಾಮ ಯಕ್ಷ ಅಭಿಮಾನಿ ಬಳಗದ ಅಧ್ಯಕ್ಷ ರತ್ನಾಕರ್ ಅಮೀನ್, ಅರುಣ್ ಡಿಸೋಜ,ವಿಷ್ಣುಮೂರ್ತಿ ಬಿಲ್ಡರ್ & ಡೆವಲಪರ್ ಮಾಲಕ ಸುಧಾಕರ ಶೆಟ್ಟಿ, ನಂದಕುಮಾರ್ ಹೆಗ್ಡೆ ಸ್ವಾಗತಿಸಿ, ಹರೀಶ್ ನಾಯಕ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಾಲಾಜಿ ಬೇಕರಿ ಮಾಲಕರಾದ ಹರೀಶ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *