

ಧಾರವಾಡ ಅ.02: ಮುಂಬರುವ ಸಂಕ್ರಾತಿಯವರೆಗೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸೇಫ್ ಆಗಿರಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಮುಂದಿನ ನವೆಂಬರ್ ಬಳಿಕ ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಇದೀಗ ಮುನ್ನಲೆಗೆ ಬಂದಿದ್ದು, ಆದರೆ ಮುಂದಿನ ಸಂಕ್ರಾತಿವರೆಗೂ ಸಿದ್ಧರಾಮಯ್ಯ ಸರ್ಕಾರ ಭದ್ರವಾಗಿರಲಿದೆ ಎನ್ನುವ ಕೋಡಿಮಠದ ಶ್ರೀಗಳ ಭವಿಷ್ಯ ಭಾರೀ ಮಹತ್ವ ಪಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದರು.


